ಶಿವಣ್ಣನ “ಘೋಸ್ಟ್‌” ಸಿನಿಮಾದಲ್ಲಿ ಡಾ.ರಾಜ್‌ ಪ್ರತ್ಯಕ್ಷ !??

masthmagaa.com:

ಸೆಂಚುರಿ ಸ್ಟಾರ್‌ ಶಿವಣ್ಣ ನಟಿಸುತ್ತಿರುವ ಮತ್ತು ಶ್ರೀನಿ ನಿರ್ದೇಶಿಸುತ್ತಿರುವ “ಘೋಸ್ಟ್‌” ಮೂವಿ ಪೋಸ್ಟರ್‌ ರಿಲೀಸ್‌ ಆಗಿ ಅಭಿಮಾನಿಗಳಲ್ಲಿ ಸಖತ್‌ ಕ್ಯೂರಿಯಾಸಿಟಿ ಮೂಡಿಸಿತ್ತು. ಇದೀಗ ಚಿತ್ರತಂಡ ಡಾ.ರಾಜ್‌ಕುಮಾರ್‌ ಅವರ ದಿನ ಬರ್ತ್‌ಡೇಗೆ ಒಂದು ಸರ್ಪೈಸ್‌ ಕೊಟ್ಟಿದ್ದಾರೆ. ಎಪ್ರಿಲ್‌ 24 ಅಣ್ಣಾವ್ರ 94ನೇ ಹುಟ್ಟುಹಬ್ಬದ ಸಲುವಾಗಿ ಈ ಸರ್ಪೈಸ್‌ ವಿಡಿಯೋ ಮಾಡಿದ್ದಾರೆ. ಇದರಲ್ಲಿ ದಿವಂಗತ ರಾಜ್‌ಕುಮಾರ್‌ ಅವರು 20 ಸೆಕೆಂಡ್‌ಗಳ ಕಾಲ ಕಾಣಿಸಿದ್ದಾರೆ. ಈ ವಿಡಿಯೋವನ್ನ ಶಿವಣ್ಣ ಅಭಿನಯ ಮಾಡಿದ್ರೆ ಆರ್ಟೀಫಿಷಿಯಲ್‌ ಇಂಟಲಿಜೆನ್ಸ್‌ ಅನ್ನೋ ಟೆಕ್ನಾಲಜಿ ಬಳಸಿ ರಾಜ್‌ಕುಮಾರ್‌ ಅವರ ಮುಖವನ್ನ ರಿಪ್ಲೇಸ್‌ ಮಾಡಲಾಗಿದೆ. ಈ ಸರ್ಪೈಸ್‌ ವಿಡಿಯೋ ಬಗ್ಗೆ ನಿರ್ದೇಶಕ ಶ್ರೀನಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

“ನಾವೆಲ್ಲರೂ ಅಣ್ಣಾವ್ರ ಫ್ಯಾನ್ಸ್‌, ಬೈ ಚಾನ್ಸ್‌ ಅಣ್ಣಾವ್ರುಬಿಗ್‌ ಸ್ಕ್ರೀನ್‌ ಮೇಲೆ ಬಂದ್ರೆ ಹೇಗಿರತ್ತೆ ? ಅನ್ನೋ ಕುತೂಹಲ ಇದ್ದೇ ಇರತ್ತೆ .ಇವಾಗಿರೋ ತಂತ್ರಜ್ಞಾನವನ್ನ ಬಳಸಿಕೊಂಡು ಏನಾದರೂ ಮಾಡಬಹುದಾ ಅಂತ ಯೋಚನೆ ಮಾಡ್ದಾಗ ನಮಗೆ ಈ ಪ್ಲಾನ್‌ ಬಂತು. ಒಂದು ಲೆವೆಲ್‌ಗೆ ಇದು ಕರೆಕ್ಟ್‌ ಆಗಿ ಬಂದಿದೆ. ಅದಕ್ಕೆ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಈ ವಿಡಿಯೋ ರಿಲೀಸ್‌ ಮಾಡಿ ವಿಶ್‌ ಮಾಡೋಣ ಅಂತ ಪ್ಲಾನ್‌ ಮಾಡಿದ್ವಿ”ಅಂತ ಹೇಳಿದ್ದಾರೆ.

“ಈ ದಿನ ನಮ್ಮ ಜೊತೆ ಇಲ್ಲದೇ ಇರುವಂತ ಪ್ರಭಾವಿ ನಟರನ್ನ ನಾವು ಈ ತಂತ್ರಜ್ಞಾನ ಮೂಲಕ ಮತ್ತೆ ಪರದೆಯ ಮೇಲೆ ನೋಡಬಹುದು. ಇದರ ಬಗ್ಗೆ ಈಗಾಗಲೇ ಎಲ್ಲಾರಿಗೂ ಒಂದು ಐಡಿಯಾ ಬಂದಿರತ್ತೆ, ಡೀಪ್‌ ಫೇಕ್‌ ಅನ್ನೊ ಟೆಕ್ನಾಲಜಿ ಬಳಸಿಕೊಂಡು ನಾವು ಗೆಸ್ಟ್‌ ಅಪಿಯರೆನ್ಸ್‌ ಅಲ್ಲಿ ಅಥ್ವಾ ಆ ನಟರನ್ನೇ ಇಟ್ಕೊಂಡು ಇಡೀ ಮೂವಿಯನ್ನೇ ಮಾಡಬಹುದು. ಅದರಲ್ಲೂ ಶಿವಣ್ಣ ಮತ್ತೆ ರಾಜ್‌ಕುಮಾರ್‌ದು ಆಲ್‌ಮೋಸ್ಟ್‌ ಒಂದೇ ರೀತಿಯ ಬಾಡಿ ಲಾಂಗ್ವೇಜ್‌ ಇರೋದ್ರಿಂದ ಈ ವಿಡಿಯೋ ಇಷ್ಟು ಅದ್ಭುತವಾಗಿ ಬರೋಕೆ ಸಾಧ್ಯ ಆಯ್ತು. ಆದರೆ ಇದು ಸಿಕ್ಕಾಪಟ್ಟೆ ಟೈಮ್‌ ತಗೊಳತ್ತೆ. ಬರೀ 20 ಸೆಕೆಂಡ್‌ ವಿಡಿಯೋ ಮಾಡೋಕೆ ನಾವು 1 ವಾರ ಕಷ್ಟಪಟ್ಟಿದೀವಿ. ಈ ತರ ಇಡೀ ಸಿನಿಮಾನೂ ಮಾಡಬಹುದು. ಆದರೆ ಬರೀ ವಿಷವಲ್ಸ್‌ ಅಷ್ಟೇ ಅಲ್ಲ, ವಾಯ್ಸ್‌ ಕೂಡ ಮ್ಯಾಚ್‌ ಆಗಬೇಕು, ಸ್ಫಷ್ಟತೆ ಇರಬೇಕು, ಬಾಡಿ ಲಾಂಗ್ವೇಜ್‌, ಮತ್ತೆ ಪರ್ಫಾಮೆನ್ಸ್‌ ಇದೆಲ್ಲಾ ಮ್ಯಾಚ್‌ ಮಾಡಿ ವಿಡಿಯೋ ಮಾಡಬೇಕು. ಇದಕ್ಕೆಲ್ಲಾ ತುಂಬಾನೇ ಟೈಮ್‌ ಬೇಕು”ಅಂತ ನಿರ್ದೇಶಕ ಶ್ರೀನಿ ಹೇಳಿದ್ದಾರೆ.

ಇನ್ನು ಶಿವರಾಜ್‌ಕುಮಾರ್‌ ಹಾಗೂ ಶ್ರೀನಿ ಕಾಂಬಿನೇಷನ್‌ನಲ್ಲಿ ಬರ್ತಾ ಇರುವ “ಘೋಸ್ಟ್‌”ಮೂವಿಯಲ್ಲಿ ಬಾಲಿವುಡ್‌ ನಟ ಅನುಪಮ್‌ ಖೇರ್‌, ಮಲಯಾಳಂ ನಟ ಜಯರಾಮ್‌ ಕೂಡ ಸ್ಕ್ರೀನ್‌ ಶೇರ್‌ ಮಾಡಲಿದ್ದಾರೆ.

-masthmagaa.com

Contact Us for Advertisement

Leave a Reply