ಭಾರತ ಸೇನೆಗೆ ʻಉಗ್ರಂʼ ಆಕ್ರಮಣಕಾರಿ ಶಕ್ತಿಯ ಎಂಟ್ರಿ!

masthmagaa.com:

ʻಉಗ್ರಂʼ ಅನ್ನೋ ಹೊಸ ಆತ್ಯಾಧುನಿಕ ರೈಫಲ್‌ನ್ನ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಜನವರಿ 8 ರಂದು ಲಾಂಚ್‌ ಮಾಡಿದೆ. DRDOನ Armament Research and Development Establishment (ARDE) ಹಾಗೂ ಹೈದರಾಬಾದ್‌ ಮೂಲದ ಪ್ರೈವೇಟ್‌ ಸಂಸ್ಥೆ ಸೇರಿ ಈ ರೈಫಲ್‌ನ್ನ ಲಾಂಚ್‌ ಮಾಡಿವೆ. ಅಂದ್ಹಾಗೆ DRDO ಇದೇ ಮೊದಲ ಬಾರಿಗೆ ಪ್ರೈವೇಟ್‌ ಇಂಡಸ್ಟ್ರಿಯೊಂದಿಗೆ ಸೇರ್ಕೊಂಡು 7.62*51 mm ಕ್ಯಾಲಿಬರ್‌ನ ರೈಫಲ್‌ ತಯಾರಿಸೋಕೆ ಮುಂದಾಗಿರೋದು. ಭಾರತೀಯ ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು ಹಾಗೂ ರಾಜ್ಯ ಪೊಲೀಸ್‌ ಪಡೆಗಳ ಕಾರ್ಯಾಚರಣೆಗಳಿಗಾಗಿ ಈ ವೆಪನ್‌ ತಯಾರಿಸಲಾಗಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply