ಸ‌ಹಕಾರದ ನೆಪದಲ್ಲಿ ಪುಟಿನ್‌ ಭೇಟಿಯಾದ ಇರಾನ್ ಅಧ್ಯಕ್ಷ!

masthmagaa.com:

ರಷ್ಯಾ-ಇರಾನ್‌ ಉಭಯ ದೇಶಗಳ ಪರಸ್ಪರ ಸಹಕಾರಕ್ಕೆ ಸಂಬಂಧಿಸಿದಂತೆ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ರಷ್ಯಾದ ಮಾಸ್ಕೋದಲ್ಲಿ ಪುಟಿನ್‌ರನ್ನ ಮೀಟ್‌ ಮಾಡಿದ್ದಾರೆ. ಭೇಟಿ ಬಳಿಕ ಮಾತನಾಡಿದ ಇರಾನ್‌ ಪ್ರಸಿಡೆಂಟ್‌ ಇಬ್ರಾಹಿಂ ರೈಸಿ ಇರಾನ್‌ ಜೊತೆ ನೆರೆಹೊರೆಯ ಸಹಕಾರಕ್ಕಾಗಿ ನಮಗೆ ರಷ್ಯಾ ಮುಖ್ಯವಾದ ರಾಷ್ಟ್ರವಾಗಿದೆ ‌ ಅಂತ ಹೇಳಿದ್ದಾರೆ. ರಷ್ಯಾ ಮತ್ತು ಇರಾನ್‌ ನಡುವೆ ಬೆಳೆಯುತ್ತಿರುವ ಸಂಬಂಧದ ಕುರಿತು ತೃಪ್ತಿ ವ್ಯಕ್ತಪಡಿಸಿರೋ ರೈಸಿ, ಇಂಧನ, ಕೃಷಿ, ಜ್ಞಾನಾಧಾರಿತ ಕಂಪನಿಗಳ ಏಳಿಗೆಗಾಗಿ ರಷ್ಯಾ-ಇರಾನ್ ಹೆಚ್ಚಿನ ಒತ್ತು ಕೊಡಲಿವೆ ಅಂತ ಹೇಳಿದ್ದಾರೆ. ಇದಕ್ಕೆ ಸಮ್ಮತಿಸಿ ಮಾತನಾಡಿದ ಪುಟಿನ್‌, ಉಭಯ ದೇಶಗಳ ಸಾರಿಗೆ ಯೋಜನೆಗಳು ಉತ್ತಮ ಪ್ರಗತಿ ಸಾಧಿಸಿದ್ದು, ಈ ಭೇಟಿ ಉಭಯ ದೇಶಗಳನ್ನ ಅತ್ಯುತ್ತಮ ಹಂತಕ್ಕೊಯ್ಯಲಿದೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply