ʻಚುನಾವಣಾ ಫಂಡಿಂಗ್‌ ಒಂದು ಕೊಂಪ್ಲಿಕೇಟೆಡ್‌ ವಿಷಯವಾಗಿದೆʼ: ಸುಪ್ರೀಂ ಕೋರ್ಟ್‌

masthmagaa.com:

ಚುನಾವಣಾ ಬಾಂಡ್‌ಗಳ ಸಿಂಧುತ್ವವನ್ನ ಪ್ರಶ್ನಿಸಿ ಸಲ್ಲಿಸಿರೋ ಅರ್ಜಿಗಳ ವಿಚಾರಣೆಯ ವೇಳೆ, ಮಂಗಳವಾರ ಅಂದ್ರೆ ನೆನ್ನೆ ಸುಪ್ರೀಂ ಕೋರ್ಟ್‌ ʻಚುನಾವಣಾ ಫಂಡಿಂಗ್‌ ಒಂದು ಕಾಂಪ್ಲಿಕೇಟೆಡ್‌ ವಿಷಯವಾಗಿದೆʼ ಅಂತ ಹೇಳಿದೆ. ಚುನಾವಣಾ ಬಾಂಡ್‌ಗಳ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, ʻಚುನಾವಣಾ ಬಾಂಡ್‌ ಯೋಜನೆಯು ರಾಜಕೀಯ ಪಕ್ಷಗಳ ಮಾಹಿತಿಯನ್ನ ತಿಳಿದುಕೊಳ್ಳೋ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡ್ತಾ ಇದೆ. ಇಂತಹ ಅಪಾರದರ್ಶಕ ಯೋಜನೆ ದೇಶದಲ್ಲಿ ಭ್ರಷ್ಟಾಚಾರವನ್ನ ಬೆಂಬಲಿಸ್ತದೆ ಮತ್ತು ಪ್ರಜಾಪ್ರಭುತ್ವವನ್ನ ನಾಶ ಮಾಡ್ತದೆ. ಯಾಕಂದ್ರೆ ಚುನಾವಣಾ ಬಾಂಡ್‌ ಯೋಜನೆ ರಾಜಕೀಯ ಪಕ್ಷಗಳ ನಡುವೆ ಸಮಾನತೆಯನ್ನ ಕಾಪಾಡೋದಿಲ್ಲʼ ಅಂತ ಹೇಳಿದ್ದಾರೆ. ಎಲ್ಲಾ ವಾದಗಳನ್ನ ಕೇಳಿದ ಸುಪ್ರೀಂ ಕೋರ್ಟ್‌, ʻಚುನಾವಣಾ ಫಂಡಿಂಗ್‌ ಸಿಂಪಲ್‌ ಆಗಿರೋ ವಿಷಯವಂತು ಅಲ್ಲವೇ ಅಲ್ಲ, ಇದೊಂದು ಬಹುದೊಡ್ಡ ವಿಷಯವಾಗಿದೆ. ಇದು ಕಾಂಪ್ಲಿಕೇಟೆಡ್‌ ಆಗಿರೋ ವಿಷಯʼ ಅಂತ ಹೇಳಿದೆ. ಅಂದ್ಹಾಗೆ ಮುಖ್ಯ ನ್ಯಾಯಾಧೀಶರಾದ ಡಿ.ವೈ. ಚಂದ್ರಚೂಡ್‌ ಅವ್ರ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠವು ಈ ವಿಚಾರಣೆಯನ್ನ ನಡೆಸಿದೆ.

-masthmagaa.com

Contact Us for Advertisement

Leave a Reply