ಬರಲಿದೆ ಎಲಾನ್‌ ಮಸ್ಕ್‌ ಬಯೋಪಿಕ್!‌

masthmagaa.com:

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಟೆಸ್ಲಾ CEO ಎಲಾನ್‌ ಮಸ್ಕ್‌ ಜೀವನ ಚರಿತ್ರೆಯ ಸಿನಿಮಾ ಹಕ್ಕುಗಳು ಖ್ಯಾತ ಹಾಲಿವುಡ್‌ ಪ್ರೊಡಕ್ಷನ್‌ ಕಂಪನಿ ʻA24 ಸ್ಟೂಡಿಯೋʼ ತೆಕ್ಕೆಗೆ ಹೋಗಿವೆ. ʻದ ವೇಲ್‌ʼ ಹಾಗೂ ʻಬ್ಲಾಕ್‌ ಸ್ವನ್‌ʼ ಚಿತ್ರಗಳನ್ನು ಡೈರೆಕ್ಟ್‌ ಮಾಡಿದ್ದ ʻಡ್ಯಾರನ್‌ ಅರೊನೋಫ್ಸ್ಕಿʼ ಈ ಸಿನೆಮಾದ ನಿರ್ದೇಶನ ಮಾಡಲಿದ್ದಾರೆ. ವಾಲ್ಟರ್‌ ಐಸಾಕ್‌ಸನ್‌ ಬರೆದಿರೋ ಮಸ್ಕ್‌ ಜೀವನಚರಿತ್ರೆ ಆಧರಿಸಿ ಈ ಸಿನೆಮಾ ತಯಾರಾಗಲಿದೆ. A24 ಬ್ಯಾನರ್‌ ಅಡಿಯಲ್ಲಿ ಡೈರೆಕ್ಟರ್‌ ಅರೊನೋಫ್ಸ್ಕಿ ಅವ್ರ ನಿರ್ಮಾಣ ಸಂಸ್ಥೆ ʻಪ್ರೋಟೊಜೊವಾ ಪಿಕ್ಚರ್ಸ್‌ʼ ಕಂಪನಿ ಸಹ ಈ ಸಿನೆಮಾಗೆ ಬಂಡವಾಳ ಹೂಡಲಿದೆ. ಸಿನೆಮಾ ಬಗ್ಗೆ X ನಲ್ಲಿ ಪೋಸ್ಟ್‌ ಹಾಕಿರೊ ಎಲಾನ್‌ ಮಸ್ಕ್‌ “ಡ್ಯಾರನ್‌ ಅವ್ರು ಇದನ್ನ ಡೈರೆಕ್ಡ್‌ ಮಾಡ್ತಿರೋದು ಬಹಳ ಖುಷಿಯಾಗಿದೆ. ಅವ್ರು ಬೆಸ್ಟ್‌ ಡೈರೆಕ್ಟರ್‌ಗಳಲ್ಲಿ ಒಬ್ರು” ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply