ವರ್ಷದ ಮೊದಲಾರ್ಧದಲ್ಲಿ 1.4 ಟ್ರಿಲಿಯನ್‌ ಡಾಲರ್‌ ಕಳೆದುಕೊಂಡ ಬಿಲಿಯನೇರ್‌ಗಳು!

masthmagaa.com:

ಕೇವಲ 2022ರ ಮೊದಲ ಅರ್ಧದಲ್ಲೇ ಜಗತ್ತಿನ ಟಾಪ್‌ 500 ಬಿಲಿಯನೇರ್‌ಗಳು ಒಟ್ಟು 1.4 ಟ್ರಿಲಿಯನ್‌ ಡಾಲರ್‌ ಅಂದ್ರೆ ಸುಮಾರು 107 ಲಕ್ಷ ಕೋಟಿ ರೂಪಾಯಿ ಸಂಪತ್ತು ಕಳೆದುಕೊಂಡಿದ್ದಾರೆ ಅಂತ ವರದಿಯಾಗಿದೆ. ಕೊವಿಡ್‌ ಹಾಗೂ ಸರ್ಕಾರದ ಕಠಿಣ ಆರ್ಥಿಕ ನಿಯಮಗಳಿಂದ ಈ ನಷ್ಟವಾಗಿದೆ ಅಂತ ಹೇಳಲಾಗಿದೆ. ಇನ್ನು ಯಾರ್ಯಾರು ಎಷ್ಟೆಷ್ಟು ಕಳೆದುಕೊಂಡ್ರು ಅಂತ ಪ್ರತ್ಯೇಕವಾಗಿ ನೋಡೋದಾದ್ರೆ, ಎಲಾನ್‌ ಮಸ್ಕ್‌ 62 ಬಿಲಿಯನ್‌ ಡಾಲರ್‌, ಜೆಫ್‌ ಬೆಜೋಜ್‌ 63 ಬಿಲಿಯನ್‌ ಡಾಲರ್‌, ಮಾರ್ಕ್‌ ಜುಕರ್‌ಬರ್ಗ್‌ಅವರ ನೆಟ್‌ ವ್ಯಾಲ್ಯೂನಲ್ಲಿ ಅರ್ಧಕ್ಕಿಂತ ಅಧಿಕ ನಷ್ಟವಾಗಿದೆ. ಇನ್ನು ಈ ನಷ್ಟ ಜಾಗತಿಕ ಬಿಲಿಯನೇರ್‌ ವರ್ಗಕ್ಕೆ ಉಂಟಾದ ಇದುವರೆಗಿನ ಅತ್ಯಂತ ಹೆಚ್ಚಿನ ನಷ್ಟ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply