ನೂತನ ಕೃತಕಬುದ್ಧಿಮತ್ತೆ ಕಂಪನಿ ʻxAIʼ ಪ್ರಾರಂಭಿಸಿದ ಮಸ್ಕ್‌!

masthmagaa.com:

ವಿಶ್ವದ ನಂಬರ್‌ ಒನ್‌ ಶ್ರೀಮಂತ ಹಾಗೂ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವ್ರು ನೂತನ AI ಕಂಪನಿ ʻxAIʼ ಲಾಂಚ್‌ ಮಾಡಿದ್ದಾರೆ. ಈ ಮೂಲಕ ಓಪನ್‌AI ಅಭಿವೃದ್ಧಿಡಿಸಿರುವ ಚಾಟ್‌ಜಿಪಿಟಿಗೆ ಸ್ಪರ್ಧೆ ನೀಡಲು ಮಸ್ಕ್‌ ಮುಂದಾಗಿದ್ದಾರೆ. ಯೂನಿವರ್ಸ್‌ನ ನಿಜ ರೂಪವನ್ನ ತಿಳಿದುಕೊಳ್ಳೋಕೆ ಹೊಸ ಕಂಪನಿ ರೆಡಿಯಾಗಿದೆ ಅಂತ ಮಸ್ಕ್‌ ತಿಳಿಸಿದ್ದಾರೆ. ಈ ಹೊಸ ಕಂಪನಿಯ ಟೀಂ ಅನ್ನ ಟೆಸ್ಲಾ ಸಿಇಒ ಎಲಾನ್‌ಮಸ್ಕ್‌ ಮುನ್ನಡೆಸಲಿದ್ದಾರೆ ಅಂತ ಕಂಪನಿ ಹೇಳಿದೆ. ನಾವು ಈ ಹಿಂದೆ ಡೀಪ್‌ಮೈಂಡ್‌, ಓಪನ್‌AI , ಗೂಗಲ್‌ ರಿಸರ್ಚ್‌, ಮೈಕ್ರೋಸಾಫ್ಟ್‌ ರಿಸರ್ಚ್‌, ಟೆಸ್ಲಾ ಮತ್ತು ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ್ದೇವೆ. ಜೊತೆಗೆ AlphaStar, AlphaCode, Inception, Minerva, GPT-3.5, ಮತ್ತು GPT-4 ಸೇರಿದಂತೆ ಕೆಲವು ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದು, ಅವುಗಳನ್ನ ಮುನ್ನಡೆಸಿದ್ದೇವೆ ಅಂತ ಹೊಸದಾಗಿ ಪ್ರಾರಂಭಿಸಲಾದ xAI ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಅಂದ್ಹಾಗೆ ಇತ್ತೀಚೆಗೆ ಸಖತ್‌ ಸೌಂಡ್‌ ಮಾಡ್ತಿರೋ ಚಾಟ್‌ಜಿಪಿಟಿ ಡೆವಲಪ್‌ ಮಾಡಿರುವ ಓಪನ್‌AIನ ಸಂಸ್ಥಾಪಕರಲ್ಲಿ ಮಸ್ಕ್‌ ಕೂಡ ಒಬ್ಬರಾಗಿದ್ದು, 2018ರಲ್ಲಿ ಕಂಪನಿಯನ್ನ ಬಿಟ್ಟಿದ್ರು.

-masthmagaa.com

Contact Us for Advertisement

Leave a Reply