ಮತ್ತೆ ಕೈತಪ್ಪಿದ ಕುಬೇರ ಪಟ್ಟ, 2ನೇ ಸ್ಥಾನಕ್ಕೆ ಕುಸಿದ ಮಸ್ಕ್!

masthmagaa.com:

ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಮತ್ತೆ ಜಗತ್ತಿನ ನಂಬರ್‌ ಒನ್‌ ಶ್ರೀಮಂತ ಪಟ್ಟವನ್ನ ಕಳೆದುಕೊಂಡಿದ್ದಾರೆ. ಒಂದ್‌ ರೀತಿ ಹಾವು-ಏಣಿ ಆಟದ ತರ ಆಗೋಗಿದೆ ಮಸ್ಕ್‌ ಜೀವನ. ಎರಡು ದಿನದ ಹಿಂದೆಯಷ್ಟೇ ಟೆಸ್ಲಾ ಷೇರುಗಳಲ್ಲಾದ ಏರಿಕೆಯಿಂದ ಮಸ್ಕ್‌ ಮೊದಲ ಸ್ಥಾನವನ್ನ ಅಲಂಕರಿಸಿದ್ರು. ಇದೀಗ ಟೆಸ್ಲಾ ಷೇರುಗಳು 5% ಇಳಿಕೆಯಾಗಿರೊ ಕಾರಣ ಒಂದೇ ದಿನದಲ್ಲಿ 1.9 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 15.5 ಸಾವಿರ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಹೀಗಾಗಿ ಮಸ್ಕ್‌ರ ನೆಟ್‌ವರ್ತ್‌ 184 ಬಿಲಿಯನ್‌ ಡಾಲರ್‌ಗೆ ತಲುಪಿದ್ದು, ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

-masthmagaa.com

Contact Us for Advertisement

Leave a Reply