ಷೇರು ಮಾರಿದ್ದು ಎಲಾನ್ ಮಸ್ಕ್! ತಲ್ಲಣ ಆಗಿದ್ದು ಟೆಸ್ಲಾ ಸಂಸ್ಥೆಯಲ್ಲಿ!

masthmagaa.com:

ಸ್ಪೇಸ್​​​​ ಎಕ್ಸ್ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್​ ಕಾರು ಕಂಪನಿ ಟೆಸ್ಲಾದಲ್ಲಿ ತಾವು ಹೊಂದಿದ್ದ 1.1 ಬಿಲಿಯನ್ ಮೊತ್ತದ ಷೇರುಗಳನ್ನು ಮಾರಿದ್ದಾರೆ. ನವೆಂಬರ್ 7ರಂದು ಈ ಬಗ್ಗೆ ಟ್ವೀಟ್ ಮಾಡಿದ್ದ ಎಲಾನ್ ಮಸ್ಕ್​​, ತೆರಿಗೆ ಕಟ್ಟೋ ಕಾರಣದಿಂದಾಗಿ 10 ಪರ್ಸೆಂಟ್ ಮಾರಾಟ ಮಾಡೋಕೆ ಯೋಚಿಸ್ತಿದ್ದೀನಿ. ನೀವ್ ಏನ್ ಹೇಳ್ತೀರಿ ಅಂತ ಫಾಲೋವರ್ಸ್ಸ್ ಬಳಿ ಕೇಳಿದ್ರು. ಅಂದ್ರೆ ಸಮೀಕ್ಷೆಗೆ ಮುಂದಾಗಿದ್ರು. ಟ್ವಿಟ್ಟರ್​ನಲ್ಲಿ ಅವರಿಗೆ 6.2 ಕೋಟಿ ಜನ ಫಾಲೋವರ್​ಗಳಿದ್ದಾರೆ. ಅದ್ರಲ್ಲಿ 57 ಪರ್ಸೆಂಟ್ ಜನ ಷೇರು ಮಾರಾಟ ಮಾಡಿ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ರು. ಅದ್ರ ಬೆನ್ನಲ್ಲೇ ಎಲಾನ್ ಮಸ್ಕ್ ಷೇರು ಮಾರಾಟ ಮಾಡಿರೋ ಸುದ್ದಿ ಹೊರಬಿದ್ದಿದೆ. ಆದ್ರೆ ದಾಖಲೆಗಳಲ್ಲಿ ಸೆಪ್ಟೆಂಬರ್ 24ರಂದೇ ಷೇರುಗಳ ಮಾರಾಟವಾಗಿರೋ ಬಗ್ಗೆ ಮಾಹಿತಿ ಇದ್ದು, ಟ್ವೀಟ್​​ನಲ್ಲಿ ನಡೆಸಿದ ಸಮೀಕ್ಷೆಯಿಂದ ಈ ನಿರ್ಧಾರ ತೆಗೆದುಕೊಂಡಿಲ್ಲ ಅನ್ನೋದು ಸ್ಪಷ್ಟವಾಗಿದೆ. ಇನ್ನು ಎಲಾನ್ ಮಸ್ಕ್ ಷೇರು ಮಾರಾಟದಿಂದ ಟೆಸ್ಲಾ ಕಂಪನಿಯ ಷೇರುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ನಷ್ಟ ಅನುಭವಿಸಿದೆ.

-masthmagaa.com

Contact Us for Advertisement

Leave a Reply