ರಿಲಯನ್ಸ್‌ ಜೊತೆ ಟೆಸ್ಲಾ ಮಾತುಕತೆ! ಮೋದಿ ಭೇಟಿ ಮಾಡ್ತಾರೆ ಮಸ್ಕ್‌!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ವಿಶ್ವದ ಟಾಪ್‌ ಬಿಲೇನಿಯರ್‌ಗಳಿಬ್ಬರು ಭಾರತದಲ್ಲಿ ಒಟ್ಟಾಗ್ತಿದ್ದಾರೆ. ತರಕಾರಿಯಿಂದ ತೈಲದವರೆಗೆ ಬೃಹತ್‌ ಕೋಟೆ ಕಟ್ಟಿರೋ ರಿಲಾಯನ್ಸ್‌ ಈಗ ಕಾರು ತಯಾರಿಕೆಗೆ ಕೂಡ ಕೈ ಹಾಕೋ ಸಂಭವ ಇದೆ. ಟೆಕ್‌ ದಿಗ್ಗಜ ಎಲಾನ್‌ ಮಸ್ಕ್‌ ವಿಶ್ವದ ಅತಿದೊಡ್ಡ ಆಟೊಮೊಬೈಲ್‌ ಇಂಡಸ್ಟ್ರಿಗಳಲ್ಲಿ ಒಂದಾದ ಭಾರತದಲ್ಲಿ, ಟೆಸ್ಲಾ ಓಡಿಸಲು ಶತಪ್ರಯತ್ನ ಮಾಡ್ತಿರೋದು ಎಲ್ಲರಿಗೂ ಗೊತ್ತೆ ಇದೆ. ಅದಕ್ಕಾಗಿ ಮಸ್ಕ್‌ ಈಗ ಪಾಲುದಾರರನ್ನ ನೋಡ್ತಿದ್ದು, ಸಣ್ಣಪುಟ್ಟದಕ್ಕೆ ಕೈ ಹಾಕದೇ ನೇರವಾಗಿ ಭಾರತದ ಬಹುಕೋಟಿ ಒಡೆಯ ಅಂಬಾನಿ ಜೊತೆ ಕೈ ಜೋಡಿಸ್ತಿದ್ದಾರೆ. ಇಬ್ಬರು ಸೇರಿ ಜಾಯಿಂಟ್‌ ವೆಂಚರ್‌ ತೆರೆಯೋಕೆ ನೋಡ್ತಿದ್ದಾರೆ ಅಂತ ವರದಿಯಾಗಿದೆ. ಇದಕ್ಕೆ ಪೂರಕವೆಂಬಂತೆ ಎಲಾನ್‌ ಮಸ್ಕ್‌ ಭಾರತಕ್ಕೆ ಬರ್ತಾ ಇದಾರೆ. ಇದೇ ತಿಂಗಳು ಭಾರತಕ್ಕೆ ಎಂಟ್ರಿ ಕೊಡಲಿರೋ ಮಸ್ಕ್‌, ಪ್ರಧಾನಿ ಮೋದಿಯವ್ರನ್ನ ಮೀಟ್‌ ಮಾಡಲಿದ್ದಾರೆ. ಈ ವೇಳೆ ಟೆಸ್ಲಾದ ಹೊಸ ಫ್ಯಾಕ್ಟರಿ ಮತ್ತು ತಮ್ಮ ಇನ್ವೆಸ್ಟ್‌ಮೆಂಟ್‌ ಪ್ಲಾನ್‌ನ ಅನೌನ್ಸ್‌ ಮಾಡಲಿದ್ದಾರೆ ಅಂತ ವರದಿಯಾಗಿದೆ. ಇನ್ನು ಟೆಸ್ಲಾ ರಿಲಾಯನ್ಸ್‌ ಜಂಟಿ ಉದ್ಯಮದ ಬಗ್ಗೆ ಟೆಸ್ಲಾ ಕಂಪನಿ ರಿಲಯನ್ಸ್‌ ಇಂಡಸ್ಟ್ರೀಸ್‌ ಜೊತೆ ಮಾತುಕತೆಯಲ್ಲಿದೆ ಅಂತೇಳಾಗ್ತಿದೆ. ಒಂದು ಮೂಲದ ಪ್ರಕಾರ, ʻಎರಡೂ ಕಂಪನಿಗಳು ಜಂಟಿಯಾಗಿ ಕೆಲಸ ಮಾಡೋ ಬಗ್ಗೆ ಒಂದು ತಿಂಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸ್ತಿವೆ. ಸದ್ಯ ಡಿಸ್‌ಕಶನ್‌ ಪ್ರಾಥಮಿಕ ಹಂತದಲ್ಲಿದೆ ಎನ್ನಲಾಗಿದೆ…. ಈ ಮೂಲಕ ಟೆಸ್ಲಾ ಭಾರತ ಎಂಟ್ರಿಗೆ ರಿಲಾಯ್ಸ್‌ ಸಾಥ್‌ ನೀಡಲಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಆದ್ರೆ ಈ ಜಂಟಿ ಉದ್ಯಮದಲ್ಲಿ ರಿಲಯನ್ಸ್‌ನ ಪಾತ್ರವೇನು ಅನ್ನೋದ್ರ ಬಗ್ಗೆ ಯಾವ್ದೇ ರೀತಿ ಸ್ಪಷ್ಟನೆ ಸಿಕ್ಕಿಲ್ಲ. ರಿಲಾಯನ್ಸ್‌ ನೇರವಾಗಿ ಕಾರು ತಯಾರಿಕೆಗೆ ಕೈ ಹಾಕುತ್ತಾ, ಅಥವಾ ಕೇವಲ ಟೆಸ್ಲಾಗೆ ಭಾರತದಲ್ಲಿ ಇವಿ ಉತ್ಪಾದನಾ ಘಟಕ ನಿರ್ಮಿಸಲು ಸಹಾಯ ಮಾಡುತ್ತಾ ಅನ್ನೋದು ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಕಂಪನಿಗಳು ಸ್ಪಷ್ಟನೆ ನೀಡ್ಬೇಕಷ್ಟೆ. ಸದ್ಯ ಉತ್ಪಾದನಾ ಘಟಕ ನಿರ್ಮಾಣಕ್ಕೆ ಟೆಸ್ಲಾ ಭಾರತದಲ್ಲಿ ಸೂಕ್ತ ಲೋಕೇಷನ್‌ನ ಹುಡುಕಾಟದಲ್ಲಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ ಸರ್ಕಾರ ಆಕರ್ಷಕ ಲ್ಯಾಂಡ್‌ ಪ್ರೊಪೋಸಲ್‌ಗಳನ್ನ ಟೆಸ್ಲಾ ಮುಂದಿಟ್ಟಿವೆ. ಜೊತೆಗೆ ಈ ಬಗ್ಗೆ ತೆಲಂಗಾಣ ಸರ್ಕಾರದೊಂದಿಗೂ ಡಿಸ್‌ಕಶನ್‌ ನಡೀತಿದೆ ಅಂತಾನೂ ವರದಿಯಾಗಿದೆ. ಅಂದ್ಹಾಗೆ ಬಹಳ ದಿನಗಳಿಂದ ಮಸ್ಕ್‌ ಭಾರತದಲ್ಲಿ ಇವಿ ವಾಹನಗಳ ಇಂಪೋರ್ಟ್‌ ಟ್ಯಾಕ್ಸ್‌ ಇಳಿಸೋಕೆ ಪ್ರಯತ್ನ ಮಾಡ್ತಿದ್ರು. ಇದಕ್ಕೆ ಸರಿಯಾಗಿ ಕಳೆದ ತಿಂಗಳು ಕೇಂದ್ರ ಸರ್ಕಾರ ಭಾರತದಲ್ಲಿ ಕಾರು ತಯಾರಕ ಕಂಪನಿಗಳು 500 ಮಿಲಿಯನ್‌ ಡಾಲರ್‌ ಇನ್ವೆಸ್ಟ್‌ ಮಾಡಿ ಫ್ಯಾಕ್ಟರಿ ಸ್ಥಾಪಿಸಿದ್ರೆ, ಕೆಲ ಮಾಡೆಲ್‌ಗಳ ಮೇಲಿನ ಆಮದು ತೆರಿಗೆಯನ್ನ 100%ನಿಂದ 15% ಇಳಿಸ್ತೀವಿ ಅಂತ ಹೇಳಿತ್ತು. ಭಾರತ ಮಸ್ಕ್‌ರಿಂದ ಆರಂಭಿಕ ಹೂಡಿಕೆಯಾಗಿ ಅಟ್ಲೀಸ್ಟ್‌ 2 ಬಿಲಿಯನ್‌ ಡಾಲರ್ ಅಂದ್ರೆ ಸುಮಾರು 37 ಸಾವಿರ ಕೋಟಿ ಕಕ್ಕಿಸ್ಬೇಕು ಅಂತ ನೋಡ್ತಿದೆ. ಟೆಸ್ಲಾ ಕೂಡ ಭಾರತದಿಂದ ಖರೀದಿ ಮಾಡ್ತಿರೋ ಆಟೋ ಬಿಡಿಭಾಗಗಳ ಮೌಲ್ಯವನ್ನ 15 ಬಿಲಿಯನ್‌ ಡಾಲರ್‌ಗೆ ಏರಿಸಬೇಕು ಅಂತ ನೋಡ್ತಿದೆ.

-masthmagaa.com

Contact Us for Advertisement

Leave a Reply