ಭಾರತಕ್ಕೆ ನೇಮಕವಾಗದ ಅಮೆರಿಕ ರಾಯಭಾರಿ, ಮುಜುಗರದಲ್ಲಿ ಅಮೆರಿಕ ಸರ್ಕಾರ!

masthmagaa.com:

ಎರಡು ವರ್ಷ ಆದ್ರು ಕೂಡ ಇನ್ನೂ ಭಾರತಕ್ಕೆ ಅಮೆರಿಕ ರಾಯಭಾರಿಯನ್ನ ನೇಮಕ ಮಾಡದೇ ಇರೋದು ಮುಜುಗರಕ್ಕೀಡು ಮಾಡಿದೆ ಅಂತ ಅಮೆರಿಕದ ಡೆಮೊಕ್ರೇಟಿಕ್‌ ಸಂಸದರೊಬ್ರು ಹೇಳಿದ್ದಾರೆ. ಜಗತ್ತಿನ ರಾಷ್ಟ್ರಗಳ ಜೊತೆ ಅಮೆರಿಕದ ಸಂಬಂಧಗಳಲ್ಲಿ ಭಾರತ ಅತ್ಯಂತ ಪ್ರಾಮುಖ್ಯತೆ ಪಡೆದಿದೆ ಅಂತ ನಾವು ಹೇಳ್ತೀವಿ. ಆದ್ರೆ ಭಾರತಕ್ಕೆ ನಮ್ಮ ರಾಯಭಾರಿಯನ್ನ ಇನ್ನೂ ನೇಮಕ ಮಾಡಿಲ್ಲ ಅನ್ನೋದು ಮುಜುಗರದ ಸಂಗತಿ ಅಂತ ಸಂಸದ ಮಾರ್ಕ್‌ ವಾರ್ನರ್‌ ಹೇಳಿದ್ದಾರೆ. ಅಂದ್ಹಾಗೆ ಭಾರತದ ರಾಯಭಾರಿಯಾಗಿ ಎರಿಕ್‌ ಗಾರ್ಸೆಟ್ಟಿ ಅವ್ರನ್ನ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ 2021ರ ಜುಲೈನಲ್ಲೇ ನಾಮಿನೇಟ್‌ ಮಾಡಿದ್ರು. ಆದ್ರೆ ಸೆನೆಟ್‌ನಲ್ಲಿ ಡೆಮೊಕ್ರೇಟಿಕ್‌ ಪಕ್ಷಕ್ಕೆ ಬೇಕಾದ ಬೆಂಬಲ ಇರದ ಕಾರಣ ವೋಟಿಂಗ್‌ ನಡೆಸಲಾಗಿಲ್ಲ. ಹೀಗಾಗಿ ಕಳೆದ 2 ವರ್ಷದಿಂದ ಭಾರತಕ್ಕೆ ಅಮೆರಿಕದ ರಾಯಭಾರಿಯನ್ನ ನೇಮಿಸಿಲ್ಲ.

-masthmagaa.com

Contact Us for Advertisement

Leave a Reply