ಪುಟಿನ್‌ ವಿರುದ್ಧ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಕಿಡಿ! ಯುದ್ಧಕ್ಕೆ ಕರೆ!

masthmagaa.com:

ರಷ್ಯಾ ವಿರುದ್ಧ ಆಗಾಗ ವಾಗ್ದಾಳಿ ನಡೆಸ್ತಿರೋ ಫ್ರಾನ್ಸ್‌ ಇದೀಗ ರಷ್ಯಾ ಅಧ್ಯಕ್ಷ ಪುಟಿನ್‌ ವಿರುದ್ಧ ಪುಟಿದೇಳಲು ಯುರೋಪ್‌ ರಾಷ್ಟ್ರಗಳಿಗೆ ಕರೆ ಕೊಟ್ಟಿದೆ. ಫ್ರಾನ್ಸ್‌ ಅಧ್ಯಕ್ಷರಾದ ಇಮಾನ್ಯುಯಲ್‌ ಮ್ಯಾಕ್ರನ್‌ ರಷ್ಯಾವನ್ನ ಶತ್ರು ಅಂತ ಕರೆದಿದ್ದಾರೆ. ಟಿವಿ ಇಂಟರ್‌ವ್ಯೂ ಒಂದ್ರಲ್ಲಿ ಮಾತನಾಡ್ತಿರೋವಾಗ ಮ್ಯಾಕ್ರನ್‌ ಈ ರೀತಿ ನೇರಾನೇರ ಹೇಳಿಕೆ ನೀಡಿದ್ದಾರೆ. ʻಯುಕ್ರೇನ್‌ನ ಸೇನಾ ಪಡೆಗಳನ್ನ ಸೋಲಿಸಿದ ಮೇಲೆ ರಷ್ಯಾ ಸುಮ್ಮನ್ನಿರಲ್ಲ. ತನ್ನ ದಾಳಿಯನ್ನ ಕಂಟಿನ್ಯೂ ಮಾಡುತ್ತೆ. ಸೋ ನಾವು ವೀಕ್‌ ಆಗಿ ಹಿಂಜರೀಬಾರ್ದು. ರಷ್ಯಾಗೆ ತಕ್ಕ ಪಾಠ ಕಲಿಸ್ಬೇಕುʼ ಅಂತ ಯುರೋಪ್‌ ರಾಷ್ಟ್ರಗಳಿಗೆ ಕರೆ ಕೊಟ್ಟಿದ್ದಾರೆ. ಅಂದ್ಹಾಗೆ ಕಳೆದ ತಿಂಗಳಷ್ಟೇ ಮ್ಯಾಕ್ರನ್‌ ಯುಕ್ರೇನ್‌ನಲ್ಲಿ ಫ್ರಾನ್ಸ್‌ ಸೇನಾ ಪಡೆಯ ನಿಯೋಜನೆಯನ್ನ ತಡೆಯೋಕೆ ಸಾಧ್ಯವಿಲ್ಲ ಅಂತ ಹೇಳಿ ವಿವಾದ ಸೃಷ್ಟಿಸಿದ್ರು…ಪುಟಿನ್‌ ಕೆಂಗಣ್ಣಿಗೆ ಗುರಿಯಾಗಿದ್ರು. ಇದೀಗ ಮತ್ತೆ ಪುಟಿನ್‌ ವಿರುದ್ಧ ಮ್ಯಾಕ್ರನ್‌ ಗುಡುಗಿದ್ದಾರೆ.

-masthmagaa.com

Contact Us for Advertisement

Leave a Reply