ಜಾರಿ ನಿರ್ದೇಶನಾಲಯದ ನಿರ್ದೇಶಕರ 3ನೇ ಅವಧಿ ವಿಸ್ತರಣೆ ಅಕ್ರಮ: ಸುಪ್ರೀಂಕೋರ್ಟ್

masthmagaa.com:

ಜಾರಿ ನಿರ್ದೇಶನಾಲಯದ (ಇ.ಡಿ)ಯ ಹಾಲಿ ನಿರ್ದೇಶಕರ ಅವಧಿಯನ್ನ 3ನೇ ಬಾರಿಗೆ ವಿಸ್ತರಣೆ ಮಾಡಿರೋದು ಕಾನೂನುಬಾಹಿರ ಅಂತ ಸುಪ್ರೀಂಕೋರ್ಟ್‌ ಹೇಳಿದೆ. ಆದರೆ ಇ.ಡಿ ನಿರ್ದೇಶಕ ಸಂಜಯ್‌ ಕುಮಾರ್‌ ಮಿಶ್ರಾ ಅವ್ರಿಗೆ ಜುಲೈ 31ರವರೆಗೂ ಅಧಿಕಾರದಲ್ಲಿ ಮುಂದುವರಿಯಲು ಅನುವು ಮಾಡಿಕೊಟ್ಟಿದೆ. ಜೊತೆಗೆ ಇ.ಡಿಗೆ ನೂತನ ಮುಖ್ಯಸ್ಥರನ್ನ ಆಯ್ಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಅಂದ್ಹಾಗೆ ಮಿಶ್ರಾ ಅವರನ್ನ ಇ.ಡಿ ಮುಖ್ಯಸ್ಥರನ್ನಾಗಿ 2018ರ ನವೆಂಬರ್‌ನಲ್ಲಿ ನೇಮಕ ಮಾಡಲಾಗಿತ್ತು. ಎರಡು ವರ್ಷಗಳ ಬಳಿಕ ಅವರಿಗೆ 60 ವರ್ಷವಾಗೋದ್ರಿಂದ ನಿವೃತ್ತರಾಗಬೇಕಿತ್ತು. ಆದರೆ 2020ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಮಿಶ್ರಾ ಅವರ ಅವಧಿಯನ್ನ ವಿಸ್ತರಣೆ ಮಾಡಿತ್ತು. ಇ.ಡಿ ಮುಖ್ಯಸ್ಥರ 2 ವರ್ಷಗಳ ಅವಧಿಯನ್ನ 3 ವರ್ಷಗಳು ಅಂತ ಬದಲಿಸಲಾಗಿತ್ತು. ಇದಕ್ಕೆ ರಾಷ್ಟ್ರಪತಿ ಅನುಮೋದನೆ ನೀಡಿದ್ದರು. ಇದನ್ನು ಕಾಮನ್ ಕಾಸ್ ಅನ್ನೊ ಎನ್‌ಜಿಒ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇದೀಗ ಅವಧಿ ವಿಸ್ತರಣೆ ಕಾನೂನುಬಾಹಿರ ಅಂತ ಸುಪ್ರೀಂಕೋರ್ಟ್‌ ಹೇಳಿದೆ.

-masthmagaa.com

Contact Us for Advertisement

Leave a Reply