ಒಮೈಕ್ರಾನ್ ಹಾವಳಿಯ ಅಂತಾರಾಷ್ಟ್ರೀಯ ಅಪ್​ಡೇಟ್​ ಇಲ್ಲಿದೆ…

masthmagaa.com:
ಇಂಗ್ಲೆಂಡ್​ನಲ್ಲಿ ಒಮೈಕ್ರಾನ್ ವೈರಾಣು ಸಾಮುದಾಯಿಕ ಮಟ್ಟದಲ್ಲಿ ಹರಡಿದೆ ಅಂತ ಯುನೈಟೆಡ್ ಕಿಂಗ್​​ಡಮ್​ ಆರೋಗ್ಯ ಸಚಿವ ಸಾಜಿದ್ ಜಾವಿದ್ ಹೇಳಿದ್ದಾರೆ. ಸಂಸತ್​ನಲ್ಲಿ ಒಮೈಕ್ರಾನ್ ತಡೆಗೆ ತೆಗೆದುಕೊಂಡಿರೋ ಟಫ್ ರೂಲ್ಸ್​​ಗಳನ್ನು ಸಮರ್ಥಿಸಿಕೊಂಡಿರೋ ಇವರು, ದೇಶದಲ್ಲಿ ಈವರೆಗೆ 336 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಇಂಗ್ಲೆಂಡ್​ನಲ್ಲಿ 261, ಸ್ಕಾಟ್​​ಲ್ಯಾಂಡ್​​ನಲ್ಲಿ 71 ಮತ್ತು ವೇಲ್ಸ್​ನಲ್ಲಿ 4 ಮಂದಿಗೆ ಒಮೈಕ್ರಾನ್ ಅಂಟಿದೆ ಅಂತ ಮಾಹಿತಿ ನೀಡಿದ್ದಾರೆ. ಇವರಲ್ಲಿ ವಿದೇಶ ಪ್ರಯಾಣ ಮಾಡದವರೂ ಸೇರಿದ್ದಾರೆ. ಹೀಗಾಗಿ ಸಮುದಾಯ ಮಟ್ಟದಲ್ಲಿ ಒಮೈಕ್ರಾನ್ ಹರಡೋಕೆ ಶುರುವಾಗಿದೆ ಅಂತ ಹೇಳಿದ್ದಾರೆ.

ಒಮೈಕ್ರಾನ್ ಬೆನ್ನಲ್ಲೇ ಫ್ರಾನ್ಸ್​ನಲ್ಲೂ ನಿರಂತರವಾಗಿ ಕೊರೋನಾ ಜಾಸ್ತಿಯಾಗ್ತಿದೆ. ಹೀಗಾಗಿ ಮುಂದಿನ 4 ವಾರಗಳ ಕಾಲ ನೈಟ್​​ಕ್ಲಬ್​​ಗಳನ್ನು ಬಂದ್ ಮಾಡುವಂತೆ ಆದೇಶಿಸಿದೆ. ಯುವಕರಲ್ಲಿ ಹೆಚ್ಚಾಗಿ ಕೊರೋನಾ ಹರಡುತ್ತಿರೋದ್ರಿಂದ ಶಾಲಾ ಕಾಲೇಜುಗಳಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯದಂತ ರೂಲ್ಸ್​​ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಸೂಚಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್​​, ಲಾಕ್​​ಡೌನ್ ಮಾಡೋ ಪ್ಲಾನ್ ಸದ್ಯಕ್ಕಿಲ್ಲ. ನಮ್ ದೇಶಲ್ಲಿ 90 ಪರ್ಸೆಂಟ್​​ನಷ್ಟು ವಯಸ್ಕರಿಗೆ ಲಸಿಕೆ ಹಾಕಿಯಾಗಿದೆ ಅಂತ ಹೇಳಿದ್ದಾರೆ.

ಅಮೆರಿಕದ ನ್ಯೂಯಾರ್ಕ್​​ನಲ್ಲಿ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೂ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಅಮೆರಿಕದ ರಾಜ್ಯವೊಂದರಲ್ಲಿ ಖಾಸಗಿ ಕಂಪನಿಗಳಲ್ಲಿ ಈ ರೀತಿ ಲಸಿಕೆ ಕಡ್ಡಾಯಗೊಳಿಸಿದಂತಾಗಿದೆ. ಇತ್ತೀಚೆಗೆ ಜೋ ಬೈಡೆನ್ ದೇಶದಾದ್ಯಂತ ನೂರಕ್ಕೂ ಹೆಚ್ಚು ನೌಕರರನ್ನು ಹೊಂದಿರೋ ಕಂಪನಿಗಳು ಜನವರಿ 4ರ ಒಳಗಾಗಿ ಕಂಪ್ಲೀಟಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಅಂತ ಆದೇಶಿಸಿದ್ರು. ಆದ್ರೆ ಈ ಆದೇಶಕ್ಕೆ ಕೋರ್ಟ್​ ತಡೆ ನೀಡಿತ್ತು.
-masthmagaa.com

Contact Us for Advertisement

Leave a Reply