ರಿಟೈರ್‌ ಆದ್ರು ಈ ಜಡ್ಜ್‌ ಮನೆಯಲ್ಲಿ ಕೆಲಸಕ್ಕೆ 28 ಮಂದಿ!

masthmagaa.com:

ರಿಟೈರ್‌ ಆದ್ರು ಕೂಡ ಸುಪ್ರಿಂ ಕೋರ್ಟ್‌ನ ಮಾಜಿ ಮುಖ್ಯನ್ಯಾಯಮೂರ್ತಿಗಳಾದ ಯು ಯು ಲಲಿತ್‌ ಅವ್ರ ಮನೆಯಲ್ಲಿ 28 ಜನ ಸಹಾಯಕ ಸಿಬ್ಬಂದಿ ಕೆಲ್ಸ ಮಾಡ್ತಿದಾರೆ ಅಂತ ವರದಿಯಾಗಿದೆ. ಸಾಮಾನ್ಯವಾಗಿ ಮುಖ್ಯನ್ಯಾಯಮೂರ್ತಿಗಳು ಸಹಾಯಕ್ಕೆ ಅಂತ 12ರಿಂದ 15 ಸಪೋರ್ಟ್‌ ಸ್ಟಾಫ್‌ಗಳನ್ನ ಇಟ್ಕೊತಾರೆ. ರಿಟೈರ್‌ ಆದ್ಮೇಲೆ ಅದ್ರಲ್ಲಿ ಒಂದಿಬ್ರನ್ನ ಉಳಿಸ್ಕೋತಾರೆ. ಆದ್ರೆ ಯು.ಯು ಲಲಿತ್‌ ಅವ್ರು 72 ದಿನದ ಅಧಿಕಾರವಧಿಯಲ್ಲಿ, ಅವ್ರ ಮನೆಯಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿ ಇದ್ರು. ರಿಟೈರ್‌ ಆದ್ಮೇಲೆ ಈಗ ಇನ್ನೂ 28 ಜನ ಹಾಗೆ ಉಳ್ಕೊಂಡಿದಾರೆ ಎನ್ನಲಾಗಿದೆ. ರಾಷ್ಟ್ರಪತಿ ಭವನ ಪ್ರಧಾನ ಮಂತ್ರಿಗಳ ಕಾರ್ಯಾಲಯ ಬಿಟ್ರೆ ಯಾವೊಬ್ಬ ಸಾಂವಿಧಾನಿಕ ಹುದ್ದೆ ಹೊಂದಿದವ್ರ ಮನೆಯಲ್ಲಿ ಇಷ್ಟೊಂದು ಜನ ಕೆಲಸಕ್ಕೆ ಇರಲ್ಲ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply