ಇಮ್ರಾನ್‌ ಖಾನ್‌ ಪತ್ನಿಗೂ ಬಂಧನದ ಭೀತಿ!

masthmagaa.com:

ಪಾಕಿಸ್ತಾನ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಪತ್ನಿ ಬುಷ್ರಾ ಬೀಬಿಗೆ ಬಂಧನದ ಭೀತಿ ಎದುರಾಗಿದೆ. ಕೆಲವು ಸಂಶಯಾಸ್ಪದ ಹಣದ ವಹಿವಾಟುಗಳು ಅವರ ಅಕೌಂಟ್‌ನಿಂದ ಆಗಿವೆ ಅಂತ ಪಾಕ್‌ ಭ್ರಷ್ಟಾಚಾರ ನಿಗ್ರಹ ದಳ(NAB ) ಆರೋಪಿಸಿದೆ. ಬುಷ್ರಾ ಬೀಬಿ ತಮ್ಮ ಮಿಲಿನೆಯರ್ ಸ್ನೇಹಿತೆ ಫರಾಹ್‌ ಶಹ್‌ಜಾದಿ ಜೊತೆ ಸೇರಿ ಅಲ್-ಖದಿರ್‌ ಟ್ರಸ್ಟ್‌ನಲ್ಲಿ ಅಕ್ರಮ ಎಸಗಿದ್ದಾರೆ ಎನ್ನಲಾಗ್ತಿದೆ. ಸೊ ಇವರು ಸಹ ಈಗಾಗ್ಲೆ ಜೈಲಿನಲ್ಲಿರೊ ಪತಿ ಇಮ್ರಾನ್‌ ಖಾನ್‌ ರೀತಿ ಜೈಲುಪಾಲಗೊ ಸಾಧ್ಯತೆ ಇದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply