ಫೇಸ್​ಬುಕ್ ಇಂಡಿಯಾ ಪಬ್ಲಿಕ್ ಪಾಲಿಸಿ ಡೈರೆಕ್ಟರ್ ನೇಮಕ! ಯಾರು ಗೊತ್ತಾ?

masthmagaa.com:

ಫೇಸ್​ಬುಕ್ ಸಂಸ್ಥೆ ಭಾರತದಲ್ಲಿ ತನ್ನ ಪಬ್ಲಿಕ್ ಪಾಲಿಸಿ ಡೈರೆಕ್ಟರ್ ಆಗಿ ಮಾಜಿ ಐಎಎಸ್ ಅಧಿಕಾರಿ ಮತ್ತು ಉಬರ್ ಸಂಸ್ಥೆಯ ಮಾಜಿ ಎಕ್ಸಿಕ್ಯುಟಿವ್ ರಾಜೀವ್ ಅಗರ್​ವಾಲ್ ಅವರನ್ನ ನೇಮಿಸಿದೆ. ಈ ಬಗ್ಗೆ ಫೇಸ್​ಬುಕ್ ಇಂಡಿಯಾ ಸಂಸ್ಥೆಯೇ ಮಾಹಿತಿ ನೀಡಿದೆ. ಇನ್ಮುಂದೆ ಭಾರತದ ಫೇಸ್​ಬುಕ್ ಬಳಕೆದಾರರ ಸುರಕ್ಷತೆ, ದಾಖಲೆಗಳ ರಕ್ಷಣೆ, ಗೌಪ್ಯತೆ ಸೇರಿದಂತೆ ವಿವಿಧ ವಿಚಾರಗಳನ್ನು ಇವೇ ನೋಡಿಕೊಳ್ತಾರೆ. ಈ ಹಿಂದೆ ಈ ಸ್ಥಾನದಲ್ಲಿದ್ದ ಅಂಕಿ ದಾಸ್ ಕಳೆದ ವರ್ಷ ಅಕ್ಟೋಬರ್​ನಲ್ಲಿ ರಾಜೀನಾಮೆ ನೀಡಿದ್ರು. ಕಳೆದ ವರ್ಷ ಬಲಪಂಥೀಯ ನಾಯಕರ ವಿರುದ್ಧದ ದ್ವೇಷಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಅಂತ ಅಂಕಿದಾಸ್ ವಿವಾದದಲ್ಲಿ ಸಿಲಿಕಿದ್ರು.

-masthmagaa.com

Contact Us for Advertisement

Leave a Reply