ಚೀನಾದಲ್ಲಿರುವ ಭಾರತೀಯ ಪತ್ರಕರ್ತರಿಗೆ ಸಂಕಷ್ಟ?

masthmagaa.com:

ಭಾರತ ಮತ್ತು ಚೀನಾ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಕಾರಣಕ್ಕೆ ವಿದೇಶಿ ವರದಿಗಾರರ ಪೋಸ್ಟಿಂಗ್‌ಗಳ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಪತ್ರಕರ್ತರು ತಮ್ಮ ಕೆಲಸವನ್ನ ಮುಂದುವರಿಸಲು ಅನುಕೂಲ ಮಾಡಿಕೊಡುವಂತೆ ಭಾರತ ಚೀನಾವನ್ನ ಒತ್ತಾಯಿಸಿದೆ. ಭಾರತದಲ್ಲಿ ವರದಿ ಮಾಡ್ತಿರುವ ಚೀನಾದ ಪತ್ರಕರ್ತರಿಗೆ ಯಾವುದೇ ಮಿತಿಯನ್ನ ಹೇರಿಲ್ಲ ಹಾಗೂ ಅವ್ರ ವರದಿ ಮಾಡುವಲ್ಲಿ ಅಥ್ವಾ ಮಾಧ್ಯಮ ಪ್ರಸಾರದಲ್ಲಿ ಯಾವುದೇ ತೊಂದರೆಯಿಲ್ಲ. ಹೀಗಾಗಿ ಚೀನಾದಿಂದ ಕೆಲಸ ಮಾಡುವ ಮತ್ತು ವರದಿ ಮಾಡುವ ಭಾರತೀಯ ಪತ್ರಕರ್ತರು ಚೀನಾದಲ್ಲೇ ಇದ್ದು ಸುರಕ್ಷಿತವಾಗಿ ವರದಿ ಮಾಡಲು ಚೀನಾ ಅಧಿಕಾರಿಗಳು ಅನುವು ಮಾಡಿಕೊಡ್ತಾರೆ ಅಂತ ನಾವು ಭಾವಿಸುತ್ತೇವೆ. ಈ ವಿಚಾರವಾಗಿ ಎರಡೂ ಕಡೆಯವರು ಸಂಪರ್ಕದಲ್ಲಿದ್ದಾರೆ ಅಂತ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಭಾರತದಲ್ಲಿ ಚೀನಾ ಪತ್ರಕರ್ತರ ಸಂಖ್ಯೆ ಶೂನ್ಯಕ್ಕೆ ಇಳಿಯಲಿದೆ. ಯಾಕಂದ್ರೆ ಭಾರತದಲ್ಲಿ ಚೀನಾ ಪತ್ರಕರ್ತರು ಅನ್ಯಾಯ ಮತ್ತು ತಾರತಮ್ಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಭಾರತೀಯ ಪತ್ರಕರ್ತರ ವಿರುದ್ಧ ಕೆಲವು ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತೆ ಅಂತ ಚೀನಾ ವಿದೇಶಾಂಗ ಸಚಿವಾಲಯ ಹೇಳಿತ್ತು.

-masthmagaa.com

Contact Us for Advertisement

Leave a Reply