ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡೋ ಸುಳಿವು ಕೊಟ್ಟ ಡುಪ್ಲೆಸಿ!

masthmagaa.com:

ಮುಂಬರುವ ಟಿ-20 ವಿಶ್ವಕಪ್‌ಗೂ ಮುನ್ನ ತಂಡಕ್ಕೆ ಮರಳೋ ಚಾನ್ಸ್‌ ಇದೆ ಅಂತ ಮಾಜಿ ದಕ್ಷಿಣ ಆಫ್ರಿಕಾ ನಾಯಕ ಪಾಫ್‌ ಡುಪ್ಲೆಸಿ ಸುಳಿವು ನೀಡಿದ್ದಾರೆ. ದಕ್ಷಿಣ ಆಫ್ರಿಕಾದ ಕೋಚ್‌ ರಾಬ್‌ ವಾಲ್ಟರ್‌ ಜೊತೆ ಈ ಬಗ್ಗೆ ಮಾತುಕತೆ ನಡೆಸಲಾಗ್ತಿದೆ ಅಂತ ಡುಪ್ಲೆಸಿ ಹೇಳಿಕೊಂಡಿದ್ದಾರೆ. ಅಲ್ಲದೆ ಡುಪ್ಲೆಸಿಯಂತ ಅನುಭವಿ ಆಟಗಾರನ ಅವಶ್ಯಕತೆ ತಂಡಕ್ಕಿದೆ ಅಂತ ಕೋಚ್‌ ವಾಲ್ಟರ್‌ ಕೂಡ ಹೇಳಿದ್ದಾರೆ. 2021ರ ಫೆಬ್ರವರಿ ನಂತರ ಡುಪ್ಲೆಸಿ ದಕ್ಷಿಣ ಆಫ್ರಿಕಾ ಪರವಾಗಿ ಆಡಿಲ್ಲ. ಆದ್ರೂ, ಡೊಮೆಸ್ಟಿಕ್‌ ಹಾಗೂ ಐಪಿಎಲ್‌ನಂತ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

-masthmagaa.com

Contact Us for Advertisement

Leave a Reply