ಮ್ಯಾಚನ್ನೇ ಆಡಿಸದೆ ರಿಸಲ್ಟ್‌ ಕೊಡ್ತಿರೋ ಪ್ರಾನ್ಸ್‌ ಕ್ರಿಕೆಟ್, ಏನಿದು ಗಿಮಿಕ್?

masthmagaa.com:

ಫ್ರಾನ್ಸ್‌ ಕ್ರಿಕೆಟ್‌ ಮಂಡಳಿ(FC) ICC ಯಿಂದ ಅನುದಾನ ಪಡೆಯೋಕೆ ಹಾಗೂ ಮಹಿಳಾ ಕ್ರಿಕೆಟ್‌ಗಾಗಿ ದೇಶ ಕಮಿಟ್ ಆಗಿದೆ ಅಂತ ಬಿಂಬಿಸೋಕೆ, ಪಂದ್ಯ ಆಯೋಜನೆ ಮಾಡದೇ ಇದ್ರು ಫೇಕ್ ರಿಸಲ್ಟ್‌ ತೋರಿಸಿ ಅಕ್ರಮ ಎಸಗಿದೆ. ಫ್ರಾನ್ಸ್‌ ಮಹಿಳಾ ಕ್ರಿಕೆಟ್ ಬೋರ್ಡ್‌ನ ಮಾಜಿ ಸದಸ್ಯೆ ಟ್ರೇಸಿ ರೋಡ್ರಿಗಸ್‌ ಹಾಗಂತ ಆರೋಪಿಸಿದ್ದಾರೆ. ಫ್ರೆಂಚ್‌ ಕ್ರಿಕೆಟ್‌, ನಕಲಿ ಪಂದ್ಯಗಳ ದಿನಾಂಕ, ಸಮಯ, ಸ್ಥಳವನ್ನ ಗೊತ್ತು ಮಾಡಿದೆ. ಹಾಗೊಮ್ಮೆ ರೋಡ್ರಿಗಸ್‌ ಪಂದ್ಯ ನಡಿಬೇಕಾಗಿರೊ ಗ್ರೌಂಡಿಗೆ ಹೋಗಿ ನೋಡಿದ್ರೆ, ಅಲ್ಲಿ ಪಿಕ್‌ನಿಕ್‌ ಟೆಂಟ್‌ಗಳು, ಮಕ್ಕಳು ಸೈಕ್ಲಿಂಗ್‌ ಮಾಡ್ತಿರೋ ದೃಶ್ಯ ಕಣ್ಣಿಗೆ ಬಿದ್ದಿದೆ. ಆದ್ರೆ ಎರಡು ದಿನ ಬಿಟ್ಟು ವೆಬ್‌ಸೈಟ್‌ನಲ್ಲಿ ಮಂಡಳಿ ಫುಲ್‌ ಸಮ್ಮರಿ ಜೊತೆ ರಿಸಲ್ಟ್‌ ಅನೌನ್ಸ್‌ ಮಾಡಿದೆ. ಹಲವು ಬಾರಿ ಮೈದಾನಕ್ಕೆ ಭೇಟಿ ನೀಡಿದಾಗ್ಲೂ ಇದೇ ಕತೆ ರಿಪೀಟ್‌ ಆಗಿದೆ. ಕೂಡಲೇ ಈ ಬಗ್ಗೆ ರೋಡ್ರಿಗಸ್‌ ICCಗೆ ದೂರು ನೀಡಿದ್ದಾರೆ. 2022ರಲ್ಲಿ 3.2 ಲಕ್ಷ US ಡಾಲರ್‌, ಅಂದ್ರೆ ಸುಮಾರು 2.65 ಕೋಟಿ ರೂಪಾಯಿ ಅನುದಾನವನ್ನ ICC ಫ್ರೆಂಚ್‌ ಕ್ರಿಕೆಟ್‌ಗೆ ನೀಡಿದೆ. ಇದ್ರಲ್ಲಿ ಅರ್ಧದಷ್ಟು ಹಣವನ್ನ, ಮಹಿಳೆಯರು ಮತ್ತು ಜೂನಿಯರ್‌ ಕ್ರಿಕೆಟ್‌ನ ಅಭಿವೃದ್ಧಿಗೆ ಬಳಸಬೇಕಿತ್ತು. ಆದ್ರೆ FC ಭ್ರಷ್ಟಾಚಾರ ಎಸಗಿರೋದು ಕ್ಲಿಯರ್ರಾಗಿ ಕಂಡು ಬಂದಿದೆ. ಈ ಬಗ್ಗೆ ICC ತನಿಖೆ ಮಾಡಲಿದೆ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply