ಧಾರವಾಡದಲ್ಲಿ ಜೋಶಿ ವಿರುದ್ದ ತೊಡೆತಟ್ಟಿದ ದಿಂಗಾಲೇಶ್ವರ ಶ್ರೀ!

masthmagaa.com:

ರಾಜ್ಯದಲ್ಲಿ ಮೋದಿ ಸರ್ಕಾರದ ಪ್ರಭಾವಿ ಸಚಿವರೊಬ್ಬರ ಲೋಕಸಭಾ ಕ್ಷೇತ್ರವೊಂದರ ಕಣಕ್ಕೆ ಕಾವಿ ಎಂಟ್ರಿ ಕೊಟ್ಟಿದೆ. ಕೇಂದ್ರ ಸಂಸದೀಯ ಸಚಿವರಾಗಿರೊ ಪ್ರಹ್ಲಾದ್‌ ಜೋಶಿ ವಿರುದ್ದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿತಿನಿ ಅಂತ ಶಿರಹಟ್ಟಿ ಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಘೋಷಿಸಿದ್ದಾರೆ. ಈ ಬಾರಿ ಧಾರವಾಡದಲ್ಲಿ ಬಿಜೆಪಿ ಲಿಂಗಾಯತರಿಗೆ ಟಿಕೆಟ್‌ ನೀಡ್ಬೇಕು ಅಂತೇಳಿ ಒತ್ತಾಯ ಮಾಡಿದ್ದ ಸ್ವಾಮೀಜಿ, ತಮ್ಮ ಮಾತಿಗೆ ಮನ್ನಣೆ ಸಿಗದ ಕಾರಣ ಸ್ವತಂತ್ರವಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಮೂಲಕ ಸಹಜವಾಗಿಯೆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರೊ ಲಿಂಗಾಯತ ಮತಗಳು ವಿಭಜನೆಯಾಗೋ ಸಾಧ್ಯತೆ ಇದ್ದು, ಇದ್ರಿಂದ ಬಿಜೆಪಿಗೆ ಭಾರಿ ಪೆಟ್ಟು ಸಾಧ್ಯತೆ ಇದೆ ಎನ್ನಲಾಗ್ತಿದೆ. ಇನ್ನು ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರೋ ಸ್ಥಳೀಯ ಕಾಂಗ್ರೆಸ್‌ ನಾಯಕರು, ಕ್ಷೇತ್ರದಲ್ಲಿ ಈಗಾಗ್ಲೇ ವಿನೋದ್‌ ಅಸೂಟಿಗೆ ನೀಡಿರೊ ಟಿಕೆಟ್‌ನ್ನ ಬದಲಾಯಿಸಿ ದಿಂಗಾಲೇಶ್ವರ ಸ್ವಾಮೀಜಿ ಅವ್ರಿಗೆ ನೀಡಿ ಅಂತ, ಕೈ ಹೈಕಮಾಂಡ್‌ಗೆ ಒತ್ತಾಯ ಮಾಡ್ತಿದ್ದಾರೆ ಅಂತ ಮಾಹಿತಿ ಲಭ್ಯ ಆಗಿದೆ. ಮತ್ತೊಂದೆಡೆ ಮಾಜಿ ಸಿಎಂ, ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ರಕ್ಷಾ ರಾಮಯ್ಯ ಅವ್ರಿಗೆ ಬೆಂಬಲ ನೀಡೊದಾಗಿ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply