ಸ್ಕೀ ಮಾಡಿ ಹೊಸ ದಾಖಲೆ ಬರೆದ ಭಾರತೀಯ ಬ್ರಿಟಿಷ್‌ ಸೇನಾಧಿಕಾರಿ!

masthmagaa.com:

ವಿಶ್ವದಲ್ಲೇ ಅತೀ ಕಡಿಮೆ ತಾಪಮಾನವಿರೋ ಅಂಟಾರ್ಟಿಕಾದಲ್ಲಿ ಸ್ಕೀಯಿಂಗ್‌ ಮಾಡಿ ಬ್ರಿಟಿಷ್‌ ಸೇನೆಯ ಮೆಡಿಕಲ್‌ ಅಧಿಕಾರಿಯೊಬ್ಳು ಗಿನ್ನಿಸ್‌ ದಾಖಲೆಯನ್ನ ಬ್ರೇಕ್‌ ಮಾಡಿದ್ದಾಳೆ. ಅಂಟಾರ್ಟಿಕಾ ಪ್ರದೇಶದಲ್ಲಿ ಒಂಟಿಯಾಗಿ, ಅತೀ ವೇಗವಾಗಿ ಸ್ಕೀಯಿಂಗ್‌ ಮಾಡಿದ ಮೊದಲ ಮಹಿಳೆ ಅನ್ನೋ ಪಟ್ಟ ಪಡ್ಕೊಂಡಿದ್ದಾಳೆ. ಭಾರತೀಯ ಮೂಲದ 33 ವರ್ಷದ ಕ್ಯಾಪ್ಟನ್‌ ಹರ್‌ಪ್ರೀತ್‌ ಚಂಡಿ ಅವ್ರು ಕಳೆದ ವರ್ಷವಷ್ಟೇ ದ್ರುವ ಪರಿಶೋಧನೆ ಮಾಡಿ ಎರಡು ಗಿನ್ನಿಸ್‌ ರೆಕಾರ್ಡ್‌ ಬ್ರೇಕ್‌ ಮಾಡಿದ್ರು. ಇದೀಗ ಮೂರನೇ ಬಾರಿ ಅಂಟಾರ್ಟಿಕಾದಲ್ಲಿ ಸ್ಕೀಯಿಂಗ್‌ ಮಾಡಿ ಹೊಸ ದಾಖಲೆ ಬರೆದಿದ್ದಾರೆ. ಇವ್ರು ಅತ್ಯಂತ ಚಳಿ ಪ್ರದೇಶ ಅಂಟಾರ್ಟಿಕಾದಲ್ಲಿ 31 ದಿನ, 13 ಗಂಟೆ, 19 ನಿಮಿಷಗಳ ಕಾಲ ಒಟ್ಟು 1,130 ಕಿಲೋಮೀಟರ್‌ ಸ್ಕೀಯಿಂಗ್‌ ಮಾಡಿ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ಸೇರ್ಸಿದ್ದಾರೆ. ಅಂದ್ಹಾಗೆ ಈ ಹಿಂದೆ ಕೆನಡಾದ ಕೆರೋಲಿನ್‌ ಕೋಟೆ (Caroline Cote) ಅನ್ನೋ ಮಹಿಳೆಯೊಬ್ರು 1 ದಿನ, 14 ಗಂಟೆ, 34 ನಿಮಿಷಗಳ ಕಾಲ ಅಂಟಾರ್ಟಿಕಾದಲ್ಲಿ ಸ್ಕೀಯಿಂಗ್‌ ಮಾಡಿ ಗಿನ್ನಿಸ್‌ ದಾಖಲೆ ಬರೆದಿದ್ರು.

-masthmagaa.com

Contact Us for Advertisement

Leave a Reply