ರೋಹಿಂಗ್ಯಾ ಗಳಲ್ಲಿ ಒಳಜಗಳ! ತಮ್ಮಲ್ಲೇ ಹೊಡೆದಾಡಿಕೊಂಡು ಮಾರಣಹೋಮ!

masthmagaa.com:

ಬಾಂಗ್ಲಾದೇಶದಲ್ಲಿ ರೋಹಿಂಗ್ಯ ಮುಸ್ಲಿಮರ ಮಾರಣಹೋಮ ನಡೆದಿದೆ. ಯಾರೋ ಹೊರಗಿನವರು ಮಾಡಿದ್ದಲ್ಲ. ಬದಲಿಗೆ ರೋಹಿಂಗ್ಯಾ ಗಳಲ್ಲೇ ಒಳಜಗಳ ಶುರುವಾಗಿ ಈ ಹತ್ಯಾಕಾಂಡ ನಡೆದಿದೆ ಅಂತ ವರದಿಯಾಗುತ್ತಿದೆ. ಮಯನ್ಮಾರ್ ನ ರಖೀನೆ ಪ್ರಾಂತದಲ್ಲಿ ಸೇನೆ ನಡೆಸುತ್ತಿರುವ ರೋಹಿಂಗ್ಯಾ ವಿರೋಧಿ ಕಾರ್ಯಾಚರಣೆಯಿಂದ ಹೆದರಿ ರೋಹಿಂಗ್ಯಾಗಳು ಅಕ್ಕ ಪಕ್ಕದ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಅದರಲ್ಲಿ ಅತಿ ಹೆಚ್ಚು ಬಾಂಗ್ಲಾದೇಶಕ್ಕೆ ಬಂದಿದ್ದಾರೆ. ಸುಮಾರು 8,50,000ಕ್ಕೂ ಅಧಿಕ ರೋಹಿಂಗ್ಯಾಗಳು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿ ವಾಸಮಾಡುತ್ತಿದ್ದಾರೆ. ಆದರೆ ಇವರಲ್ಲೆ ಈಗ ಶಾಂತಿ ಇಲ್ಲ. ರೋಹಿಂಗ್ಯಾ ಗಳಲ್ಲಿ ARSA ಅನ್ನೋ ಒಂದು ಸಂಘಟನೆಯಿದೆ. ಅಂದರೆ, Arakan rohingya salvation army ಅಂತ. ಈ ಗುಂಪು ತನ್ನನ್ನ ತಾನು ಎಲ್ಲ ರೋಹಿಂಗ್ಯಾ ಮುಸ್ಲಿಮರ ಪ್ರತಿನಿಧಿ ಅಂತ ಪ್ರೊಜೆಕ್ಟ್ ಮಾಡುತ್ತೆ. ಇಂತ ಟೈಮಲ್ಲಿ ಮೊಹಿಬ್ ಉಲ್ಲಾ ಅನ್ನೋ ರೋಹಿಂಗ್ಯ ಹಕ್ಕುಗಳ ಹೋರಾಟಗಾರ ಸಾಕಷ್ಟು ಮುನ್ನೆಲೆಗೆ ಬಂದರು. ಇವರ ಜನಪ್ರಿಯತೆ ಹೆಚ್ಚಾಗುತ್ತ ಹೋಯಿತು. ಇದನ್ನು ಸಹಿಸದ ARSA ಕಡೆಯವರು, ಮೊಹಿಬ್ ಉಲ್ಲಾಗೆ ಗುಂಡಿಟ್ಟು ಹತ್ಯೆ ಮಾಡಿದ್ರು. ಅದಾಗಿ ಒಂದೇ ವಾರದಲ್ಲಿ, ರೋಹಿಂಗ್ಯಾ ಮುಸ್ಲಿಮರು ಧಾರ್ಮಿಕ ಸಭೆ ಸೇರಿದ್ದ ಜಾಗಕ್ಕೆ ನುಗ್ಗಿದ ARSA ಸದಸ್ಯರು, ಬಂದೂಕು ಹಾಗೂ ಮಚ್ಚು ಬಳಸಿ ಏಳು ಜನರನ್ನು ಕೊಂದು ಹಾಕಿದ್ದಾರೆ. ARSAಗೆ ಪ್ರೊಟೆಕ್ಷನ್ ಮನಿ ಕೊಡಲಿಲ್ಲ ಅಂತ ಈ ದಾಳಿ ನಡೆದಿದೆ ಅಂತ ವರದಿಯಾಗುತ್ತಿದೆ. ಪ್ರೊಡಕ್ಷನ್ ಮನಿ ಅಂದರೆ, ನಿಮ್ಮ ಜೀವಕ್ಕೆ ಏನು ತೊಂದರೆ ಆಗಬಾರದು ಎಂದರೆ ನಮಗೆ ನೀವು ದುಡ್ಡು ಕೊಡಬೇಕು ಅಂತ. ಆಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬರುವ ಮುಂಚೆ ತಾಲಿಬಾನಿಗಳು ಕೂಡ ಇದನ್ನು ನಡೆಸುತ್ತಿದ್ದರು. ರೋಹಿಂಗ್ಯಾಗಳ ಏಕೈಕ ಪ್ರತಿನಿಧಿ ನಾವೆ ಎಂದು ಹೇಳಿಕೊಳ್ಳುವ ARSA ಕೂಡ ಇದೆ ಕೆಲಸ ಮಾಡುತ್ತಿದೆ.

-masthmagaa.com

Contact Us for Advertisement

Leave a Reply