ಡೆಲ್ಟಾ’ ಆಯ್ತು.. ಈಗ ವೇಗ ಪಡೆಯುತ್ತಿದೆ ‘ಲ್ಯಾಂಬ್ಡಾ’ ರೂಪಾಂತರಿ

masthmagaa.com:

ಡೆಲ್ಟಾ ಆತಂಕದಲ್ಲಿರೋ ವಿಶ್ವಕ್ಕೆ ಹೊಸ ಟೆನ್ಶನ್ ಶುರುವಾಗಿದೆ. ಲ್ಯಾಟಿನ್ ಅಮೆರಿಕದ ದೇಶ ಪೆರುವಿನಲ್ಲಿ ಮೊದಲು ಕಾಣಿಸಿಕೊಂಡ ರೂಪಾಂತರಿ ತಳಿ ಲಂಬ್ಡಾ ತುಂಬಾ ವೇಗವಾಗಿ ಹರಡೋಕೆ ಶುರುವಾಗಿದೆ. ಇದೊಂಥರಾ ಡಿಫ್ರೆಂಟ್ ರೂಪಾಂತರಿಯಾಗಿದ್ದು, ಇದ್ರಿಂದ ವಿಜ್ಞಾನಿಗಳ ಟೆನ್ಶನ್ ಮತ್ತೆ ಜಾಸ್ತಿಯಾಗಿದೆ. ಈ ವೈರಾಣು ಈಗಾಗಲೇ 27 ದೇಶಗಳಿಗೆ ಹರಡಿದೆ. ಈ ವೈರಾಣು ಡಿಸೆಂಬರ್ ತಿಂಗಳಲ್ಲಿ ಪೆರುವಿನಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಆಗ ಇದಕ್ಕೆ ಸಿ.37 ಅಂತ ಹೆಸರಿಡಲಾಗಿತ್ತು. ಅಂದಹಾಗೆ ಪೆರುವಿನ ಮಾಲೆಕ್ಯುಲರ್​ ಬಯಾಲಜಿ ವೈದ್ಯ ಪಾಬಲೋ ಪ್ರಕಾರ, ಆರಂಭದಲ್ಲಿ ಇದು ಕೇವಲ 200ರಲ್ಲಿ ಒಬ್ಬರಲ್ಲಿ ಮಾತ್ರವೇ ಪತ್ತೆಯಾಗ್ತಿತ್ತು.. ಮಾರ್ಚ್​ ತಿಂಗಳಲ್ಲಿ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಅರ್ಧದಷ್ಟು ಈ ವೈರಾಣೇ ಇತ್ತು. ಅದೇ ಮೇ ಮತ್ತು ಜೂನ್ ತಿಂಗಳಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಪೈಕಿ ಇದು 82 ಪರ್ಸೆಂಟ್​ನಷ್ಟಿದೆ. ಅಂದ್ರೆ ಪೆರುವಿನಲ್ಲಿ 100 ಮಂದಿಗೆ ಕೊರೋನಾ ಬಂದರೆ ಅದ್ರಲ್ಲಿ 82 ಮಂದಿಗೆ ಲಂಬ್ಡಾ ತಳಿಯೇ ತಗುಲಿದೆ.. ಅಷ್ಟೇ ಅಲ್ಲ.. ಬೇರೆ ತಳಿಗಳಿಗೆ ಹೋಲಿಸಿದ್ರೆ, ಈ ಥಳಿಯ ಹರಡುವಿಕೆ ಮತ್ತು ಸಾವಿನ ಪ್ರಮಾಣ ಕೂಡ ಜಾಸ್ತಿ ಇದೆ ಅಂತಲೂ ಪೆರು ತಜ್ಞರು ಎಚ್ಚರಿಸಿದ್ದಾರೆ. ಪಕ್ಕದ ಚಿಲಿಯಲ್ಲೂ ಕೊರೋನಾ ಸೋಂಕಿತರ ಪೈಕಿ 3ನೇ ಒಂದು ಭಾಗದಷ್ಟು ರೋಗಿಗಳಿಗೆ ಇದೇ ರೂಪಾಂತರಿ ವೈರಾಣು ಅಂಟಿದೆ. ಬ್ರಿಟನ್​ನಲ್ಲೂ ಈವರೆಗೆ 6 ಮಂದಿಗೆ ಈ ಸೋಂಕು ತಗುಲಿದೆ. ಸದ್ಯ ಭಾರತಕ್ಕೆ ಇನ್ನೂ ಕೂಡ ಲಬ್ಡಾ ವೇಷಧಾರಿ ಕೊರೋನಾ ಬಂದಿಲ್ಲ. ಬದಲಿಗೆ ಡೆಲ್ಟಾ ಹಾವಳಿ ಜೋರಾಗಿದೆ. ಇನ್ನು ಅಮೆರಿಕದಲ್ಲಿ ಈವರೆಗೆ ಕೊರೋನಾಗೆ ಬಲಿಯಾದವರ ಪೈಕಿ 99 ಪರ್ಸೆಂಟ್​ನಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿರಲಿಲ್ಲ ಅಂತ ತಿಳಿಸಿದೆ.

-masthmagaa.com

Contact Us for Advertisement

Leave a Reply