ದಿಲ್ಲಿ ಮುಖ್ಯ ಕಾರ್ಯದರ್ಶಿ ನರೇಶ್‌ ಕುಮಾರ್‌ ವಿರುದ್ಧ FIR ದಾಖಲು!

masthmagaa.com:

ಒಂದು ಕಡೆ ದಿಲ್ಲಿ ಸರ್ಕಾರ ಜೈಲಿನಲ್ಲಿದ್ರೆ, ಮತ್ತೊಂದ್‌ ಕಡೆ ದಿಲ್ಲಿ ಸರ್ಕಾರದ ಟಾಪ್‌ ಅಧಿಕಾರಿಗಳ ಮೇಲೆ ಒಂದೊಂದಾಗಿ ಕೇಸು ದಾಖಲಾಗ್ತಿವೆ. ನೆನ್ನೆ ಹಳೇ ಪ್ರಕರಣ ಒಂದ್ರ ಮೇಲೆ ಅರವಿಂದ್‌ ಕೇಜ್ರಿವಾಲ್‌ರ ಪರ್ಸನಲ್‌ ಅಸಿಸ್ಟಂಟ್‌ ಬಿಭಾವ್‌ ಕುಮಾರ್‌ನ್ನ ಕೆಲಸದಿಂದ ವಜಾಗೊಳಿಸಲಾಗಿತ್ತು. ಇದೀಗ ಹಗರಣವೊಂದ್ರ ಸಾಕ್ಷಿಗಳ ಕಳ್ಳತನದಲ್ಲಿ ಭಾಗಿಯಾಗಿರೋ ಆರೋಪದ ಮೇಲೆ ದಿಲ್ಲಿ ಮುಖ್ಯ ಕಾರ್ಯದರ್ಶಿ ನರೇಶ್‌ ಕುಮಾರ್‌ ವಿರುದ್ಧ FIR ದಾಖಲಿಸಲಾಗಿದೆ. ಜೊತೆಗೆ ಹಿರಿಯ IAS ಅಧಿಕಾರಿ YVVJ ರಾಜಶೇಖರ್‌ ಅವ್ರು ವಿರುದ್ಧಾನೂ FIR ದಾಖಲಾಗಿದೆ. ಉತ್ತರಾಖಂಡದ ಶಾಲೆಯೊಂದಕ್ಕೆ ಫೆಬ್ರುವರಿ 14ರಂದು 4 ವ್ಯಕ್ತಿಗಳು ನುಗ್ಗಿ ಹಗರಣವೊಂದಕ್ಕೆ ಸಂಬಂಧಿಸಿದ ಪ್ರಮುಖ ಎವಿಡೆನ್ಸ್‌ಗಳನ್ನೇ ದರೋಡೆ ಮಾಡಿದ್ದಾರೆ. ಹೀಗಂತ ಆ ಶಾಲೆಯನ್ನ ನಡೆಸ್ತಿರೋ ʻಪ್ಲೆಸೆಂಟ್‌ ವ್ಯಾಲಿ ಫೌಂಡೇಷನ್‌ʼ ಅನ್ನೋ NGO ಕಂಪ್ಲೈಂಟ್‌ ಮಾಡಿದೆ. ಸೋ NGOನ ಕಂಪ್ಲೈಂಟ್‌ ಮೇರೆಗೆ ನರೇಶ್‌ ಕುಮಾರ್‌ ಅವ್ರ ವಿರುದ್ದ FIR ದಾಖಲಾಗಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ, ದೆಹಲಿ ಸಚಿವೆ ಅತಿಶಿ ಅವ್ರು ಬಿಜೆಪಿ ಮೇಲೆ ಕಿಡಿಕಾರಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೊಡ್ಡ ರಾಜಕೀಯ ಪಿತೂರಿ ನಡೆಸ್ತಿದೆ. ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರೋಕೆ ಟ್ರೈ ಮಾಡ್ತಿದೆ. ದೆಹಲಿ ಸರ್ಕಾರದ ಅಧಿಕಾರಿಗಳು ಈಗ ಮೀಟಿಂಗ್‌ಗೆ ಬರೋದನ್ನೇ ನಿಲ್ಲಿಸಿದ್ದಾರೆ ಅಂತ ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply