ಬಾಂಗ್ಲಾಗೆ ಬಂದಿಳಿದ ಅಫ್ಘನ್ ಕ್ರಿಕೆಟ್ ತಂಡ!

masthmagaa.com:

ತಾಲಿಬಾನಿಗಳ ಟೇಕೋವರ್ ಬಳಿಕ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನದ ಕ್ರಿಕೆಟ್ ತಂಡವೊಂದು ಬಾಂಗ್ಲಾದೇಶಕ್ಕೆ ಬಂದಿದೆ. ಅಂಡರ್ 19 ಕ್ರಿಕೆಟ್ ತಂಡ ಇದಾಗಿದ್ದು, ಬಾಂಗ್ಲಾ ವಿರುದ್ಧ 5 ಏಕದಿನ ಮತ್ತು ಟೆಸ್ಟ್ ಪಂದ್ಯ ಆಡಲಿದೆ. ಅಫ್ಘನ್ ತಂಡದ ಪೈಕಿ 8 ಮಂದಿ ಈಗಾಗಲೇ ಢಾಕಾಗೆ ಬಂದಿದ್ದು, ಉಳಿದವರು ಮತ್ತೆರಡು ತಂಡಗಳಲ್ಲಿ ಬರಲಿದ್ಧಾರೆ. ಇತ್ತೀಚೆಗಷ್ಟೇ ಹಲವು ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಿಗೆ ತಾಲಿಬಾನಿಗಳು ಗ್ರೀನ್ ಸಿಗ್ನಲ್ ಕೊಟ್ಟಿದ್ದರು.

-masthmagaa.com

Contact Us for Advertisement

Leave a Reply