ಬರ್ತಿದೆ ಕನ್ನಡದ ಮೊದಲ ಏಲಿಯನ್‌ ಚಿತ್ರ!

masthmagaa.com:

ಒಂಬತ್ತು ದಶಕಗಳ ಸುದೀರ್ಘ ಇತಿಹಾಸ ಹೊಂದಿರುವ ಸ್ಯಾಂಡಲ್‌ವುಡ್‌ ಸದ್ಯ ಯಶಸ್ಸಿನ ಉತ್ತುಂಗದಲ್ಲಿದೆ. KGF, ಕಾಂತಾರದಂತಹ ಚಿತ್ರಗಳು ದೇಶವ್ಯಾಪಿ ಸದ್ದು ಮಾಡ್ತಿವೆ. ಆದ್ರೆ ಇಷ್ಟೆಲ್ಲ ಇದ್ರು ಕೂಡ ಕನ್ನಡ ಸಿನಿರಸಿಕರಿಗೆ ಸದಾ ಒಂದು ಕೊರತೆ ಕಾಡ್ತಿತ್ತು. ಕನ್ನಡದಲ್ಲಿ ಸೈ-ಫೈ ಅಂದ್ರೆ ವಿಜ್ಞಾನ ಆಧಾರಿತ ಮೂವಿಗಳೇ ಬರ್ತಿರ್ಲಿಲ್ಲ. ಅಲ್ಲೋ ಇಲ್ಲೋ ಉಪೇಂದ್ರ ಅವರ ʻಹಾಲಿವುಡ್‌ʼ, ಮತ್ತು ಸುನೀಲ್‌ ರಾವ್‌ ಅಭಿನಯದ ʻತುರ್ತು ನಿರ್ಗಮನʼ, ರಮೇಶ್‌ ಅರವಿಂದ್‌ ಅಭಿನಯದ “ಆರ್ಯಭಟ”ದಂತಹ ಚಿತ್ರಗಳನ್ನ ಬಿಟ್ರೆ ಈ ಜಾನರ್‌ನಲ್ಲಿ ಹೆಚ್ಚಿನ ಸಿನಿಮಾಗಳು ಬಂದಿರ್ಲಿಲ್ಲ. ಇನ್ನು ಏಲಿಯನ್‌ ಅಥವಾ ಅನ್ಯಗ್ರಹ ಜೀವಿಗಳ ಬಗೆಗಿನ ಚಿತ್ರಗಳಂತೂ ದೂರದ ಮಾತು… ಆದ್ರೆ ಈಗ ಆ ಕುತೂಹಲವನ್ನ ಕೂಡ ತಣಿಸೋಕೆ ಒಂದು ಚಿತ್ರತಂಡ ತಯಾರಾಗಿದೆ. ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಏಲಿಯನ್ಸ್‌ ಆಧಾರಿತ ಚಿತ್ರ ಬಿಡುಗಡೆ ಹಂತದಲ್ಲಿದೆ. ರಘು ದೀಕ್ಷಿತ್‌ ಮ್ಯೂಸಿಕ್‌ ಚಾನೆಲ್‌ನಲ್ಲಿ ʻಮಂಡಲʼ ಅನ್ನೋ ಚಿತ್ರದ ಆಫಿಶಿಯಲ್‌ ಟ್ರೇಲರ್‌ ರಿಲೀಸ್‌ ಆಗಿದೆ. ಟ್ರೇಲರ್‌ನ್ನು ನೋಡಿದ್ರೆ ತುಂಬಾ ಕ್ರೀಯೆಟೀವ್‌ ಆಗಿ ಈ ಚಿತ್ರ ಮೂಡಿ ಬಂದಿದೆ ಅಂತ ಅನ್ಸತ್ತೆ. ಅಜಯ್‌ ಸರ್ಪೆಶ್ಕರ್‌ ಅವರ ನಿರ್ದೇಶನದಲ್ಲಿ ಮತ್ತು ನಿರ್ಮಾಣದಲ್ಲಿ, ಪ್ರಕಾಶ್‌ ಬೆಳವಾಡಿ ಮತ್ತು ಅಜಯ್‌ ಸರ್ಪೆಶ್ಕರ್‌ ಅವರ ಚಿತ್ರಕತೆಯಲ್ಲಿಈ ಚಿತ್ರ ರೆಡಿಯಾಗಿದೆ. ಟ್ರೇಲರ್‌ ಗಮನಿಸಿದ್ರೆ ನಮಗೆ ಮೂವಿ ಬಗ್ಗೆ ಒಂದು ಸಣ್ಣ ಐಡಿಯಾ ಬರತ್ತೆ. ಚಿತ್ರದಲ್ಲಿ ನಾಯಕಿ ಎರೋಸ್ಪೇಸ್‌ ಇಂಜಿನಿಯರ್‌, ಈಕೆಯನ್ನು ಯುಫಓ ಅಂದ್ರೆ ಎಲಿಯನ್ಸ್‌ಗಳು ಕಿಡ್ನಾಪ್‌ ಮಾಡಿರತ್ತೆ, ಇದಕ್ಕೆ ಯಾವುದೇ ರೀತಿಯ ಫ್ರೂಫ್‌ ಕೂಡ ಇರೋದಿಲ್ಲ.ಅವಳನ್ನ ಸರ್ಚ್‌ ಮಾಡೋಕೆ ಅವಳ ಬಾಯ್‌ಫ್ರೇಂಡ್‌ ಯಾವ್‌ ಯಾವ್‌ ರೀತಿ ಕಷ್ಟ ಪಡ್ತಾನೆ ಅನ್ನೋದು, ಈ ಕಿಡ್ನಾಪ್‌ ಹಿಂದೆ ನಿಜವಾಗಿಯೂ ಎಲಿಯನ್ಸ್‌ಗಳು ಇದಾವಾ? ಅಂತ ಸರ್ಚ್‌ ಮಾಡೊದು, ಇದೇ ಅದರ ಮೇನ್‌ ಕಾನ್ಸೆಪ್ಟ್‌. ಅನಂತ್‌ ನಾಗ್‌, ಪ್ರಕಾಶ್‌ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಕಿರಣ್‌ ಶ್ರೀನಿವಾಸ್‌ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಾಕೆಟ್‌ ಸೈನ್ಸ್‌ ಮತ್ತು ಎಲೀಯನ್ಸ್‌ಗಳ ಈ ಚಿತ್ರ ಇದೆ ಮಾರ್ಚ್‌ 10ಕ್ಕೆ ರಿಲೀಸ್‌ ಆಗಲಿದೆ. ಡಬ್ಬಿಂಗ್‌ ಬಗ್ಗೆ ಮಾತನಾಡಿದ ಪ್ರಕಾಶ್‌ ಬೆಳವಾಡಿಯವರು “ಡಬ್ಬಿಂಗ್‌ನ ಸ್ಟಾಪ್‌ ಮಾಡಿದ್ರಿಂದ ನಮ್ಮ ಕನ್ನಡದ ಜನಕ್ಕೆ ಬೇರೆ ಬಾಷೆಯ ಸಿನಿಮಾ ನೋಡೊಕೆ ನಾವೇ ದಾರಿ ಮಾಡಿಕೊಟ್ಟ್‌ ಹಾಗಿದೆ, ಭಾಷೆ ಬರದೇ ಇದ್ರು ಸಹ ಭಾಷೆಯನ್ನ ಕಲ್ತು ಸಿನಿಮಾ ನೋಡೊಕೆ ಶುರು ಮಾಡಿದ್ದಾರೆ, ಹೈ ಬಜೆಟ್‌ ಸಿನಿಮಾ ಅಥ್ವಾ ಲೋ ಬಜೆಟ್‌ ಸಿನಿಮಾ ಅಂತ ಡಿವೈಡ್‌ ಮಾಡದೇ ಒಳ್ಳೆ ಕತೆಯಿರುವ ಸಿನಿಮಾ ಅಂತ ತೋರಿಸಿಕೊಳ್ಳಬೇಕು” ಮಂಡಲ ಸಿನಿಮಾದ ಬಗ್ಗೆ ಮಾತನಾಡಿದ ಇವರು, “ಈ ಚಿತ್ರ ಸೈನ್ಸ್‌ ಫಿಕ್ಷನ್‌ ಮತ್ತು ಸೈನ್ಸ್‌ ಫ್ಯಾಂಟಸಿಯನ್ನ ಒಳಗೊಂಡ ಚಿತ್ರ. ಇಂತಹ ಸಿನಿಮಾಗಳನ್ನ ಮಾಡುವಾಗ ಅದ್ರಲ್ಲೂ ಹೊಸಬರಿಗೆ ಇದು ತುಂಬಾ ಕಷ್ಟವಾಗತ್ತೆ, ಇದರ ಬಗ್ಗೆ ಅವರು ಗ್ರಾಫಿಕ್ಸ್‌ ಇಂಜಿನಿಯರ್‌, ಸೈಂಟಿಸ್ಟ್‌ಗಳ ಜೊತೆ ಕೂತು ಮಾತಾಡಿ ನಂತರ ಸಿನಿಮಾ ಬಜೆಟ್‌ ಎಷ್ಟ್‌ ಆಗಬಹುದು ಅಂತ ಅಂದಾಜಿಸಬೇಕು. ” ಅಂತ ತಮ್ಮ ಅಭಿಪ್ರಾಯವನ್ನ ನಮ್ಮೊಂದಿಗೆ ಹಂಚಿಕೊಂಡಿದ್ದರು.

-masthmagaa.com

Contact Us for Advertisement

Leave a Reply