ಶಂಕಿತ ಉಗ್ರನ ಕಾಲಿಗೆ ಜಿಪಿಎಸ್​ ಟ್ರ್ಯಾಕರ್ ಕಟ್ಟಿದ ಪೊಲೀಸರು! ಯಾಕೆ?

masthmagaa.com:

ಜಾಮೀನಿನ ಮೇಲೆ ಬಿಡುಗಡೆಗೊಂಡಿರೋ ಶಂಕಿತ ಉಗ್ರನ ಮೇಲೆ ಜಮ್ಮು & ಕಾಶ್ಮೀರ ಪೊಲೀಸರು, ಆರೋಪಿಯ ಕಾಲಿಗೆ ಜಿಪಿಎಸ್​ ಟ್ರ್ಯಾಕರ್ ಕಟ್ಟಿದ್ದಾರೆ. ಶಂಕಿತ ಉಗ್ರರ ಚಲನಚಲನಗಳನ್ನ ತಿಳಿಯೋದಕ್ಕೆ ಮತ್ತು ಅವ್ರ ಮೇಲೆ ಹದ್ದಿನ ಕಣ್ಣನ್ನ ಇಡೋದಕ್ಕೆ ಪೊಲೀಸ್‌ ಜಿಪಿಎಸ್​ ಟ್ರ್ಯಾಕರ್‌ ಅಳವಡಿಸಿದ್ದಾರೆ. ಅಂದ್ಹಾಗೆ ಅಮೆರಿಕ, ಯುಕೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್​ ಸೇರಿದಂತೆ ಹಲವು ದೇಶಗಳು ಈಗಾಗಲೇ ಈ ಜಿಪಿಎಸ್​ ಟ್ರ್ಯಾಕರ್‌ ಬಳಸ್ತಾ ಇವೆ. ಜಾಮೀನು, ಪೆರೋಲ್ ಮತ್ತು ಗೃಹಬಂಧನದಲ್ಲಿರೋ ಆರೋಪಿಗಳ ಚಲನವಲನವನ್ನ ಪತ್ತೆಹಚ್ಚೋದಕ್ಕೆ ಇದನ್ನ ಅಳವಡಿಸಲಾಗ್ತಾ ಇದೆ. ಕಾರಾಗೃಹಗಳ ದಟ್ಟಣೆಯನ್ನ ದೊಡ್ಡ ಪ್ರಮಾಣದಲ್ಲಿ ನಿವಾರಿಸೋದಕ್ಕೆ ಇದು ಸಹಾಯವಾಗಲಿದೆ ಎನ್ನಲಾಗಿದೆ. ಇಂತಹ ಸಾಧನವನ್ನ ಪರಿಚಯಿಸಿದ ದೇಶದ ಮೊದಲ ಪೊಲೀಸ್ ಇಲಾಖೆ ಜಮ್ಮು ಕಾಶ್ಮೀರದ್ದಾಗಿದೆ.

-masthmagaa.com

Contact Us for Advertisement

Leave a Reply