ಮಾನವ ಸಹಿತ ಗಗನಯಾನ ಮಿಷನ್‌ನ ಮೊದಲ ಟೆಸ್ಟ್‌ ಫ್ಲೈಟ್‌ ಈ ವರ್ಷವೇ ಲಾಂಚ್‌ ಆಗಲಿದೆ: ಕೇಂದ್ರ ಸಚಿವ

masthmagaa.com:

ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಮಿಷನ್‌ ʻಗಗನಯಾನʼ 2024ರಲ್ಲಿ ಲಾಂಚ್‌ ಆಗಲಿದೆ ಅಂತ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ. ಈ ಬಗ್ಗೆ ಮಾತಾಡಿದ ಸಿಂಗ್, ದೇಶದ 75ನೇ ಸ್ವಾಂತತ್ರ್ಯೋತ್ಸವದ ವರ್ಷದಂದು ಅಂದ್ರೆ ಈ ವರ್ಷದಂದು ಗಗನಯಾನ ಮಿಷನ್‌ನ್ನ ಉಡಾವಣೆ ಮಾಡೋಕೆ ಯೋಜನೆ ಹಾಕಿತ್ತು. ಬಟ್‌ ಕೋವಿಡ್‌ನಿಂದ ಮುಂದೂಡಬೇಕಾಗಿ ಬಂತು. ಆದ್ರೆ ಮಿಷನ್‌ನ ಮೊದಲ ಟೆಸ್ಟ್‌ ಫ್ಲೈಟ್‌ನ್ನ ಈ ವರ್ಷದ ಅಂತ್ಯದಲ್ಲಿ ಶೆಡ್ಯೂಲ್‌ ಮಾಡಲಾಗಿದೆ ಅಂತ ಹೇಳಿದ್ದಾರೆ. ಅಲ್ದೇ ಈ ಟೆಸ್ಟ್‌ ಫ್ಲೈಟ್‌ ನಂತರ ಮಹಿಳೆಯನ್ನ ಹೋಲುವ ಮಾನವ ರೊಬೋಟ್‌ ʻವ್ಯೋಮ ಮಿತ್ರʼನನ್ನ ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಕಳಿಸಲಾಗುತ್ತೆ. ಈ ಎರಡು ಟೆಸ್ಟ್‌ ಫ್ಲೈಟ್‌ಗಳ ರಿಸಲ್ಟ್‌ನ್ನ ನೋಡಿ 2024ಕ್ಕೆ ಇಬ್ಬರು ಗಗನಯಾತ್ರಿಗಳನ್ನ ಭೂಮಿಯ ಲೋವರ್‌ ಆರ್ಬಿಟ್‌ ಅಂದ್ರೆ ಕೆಳ ಕಕ್ಷೆಗೆ ಕಳಿಸಲಾಗುತ್ತೆ ಅಂತ ಸಚಿವರು ಹೇಳಿದ್ದಾರೆ. ಅಂದ್ಹಾಗೆ ಈ ಗಗನಯಾನ ಮಿಷನ್‌ನ್ನ 2018ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಅನೌನ್ಸ್‌ ಮಾಡಿದ್ರು. ಇದಕ್ಕೆ ಸುಮಾರು 10 ಸಾವಿರ ಕೋಟಿ ರೂಪಾಯಿ ವೆಚ್ಚವಾಗಬಹುದು ಅಂತ ಅಂದಾಜು ಮಾಡಲಾಗಿದೆ. ಇನ್ನು ಈ ಮಿಷನ್‌ ಯಶಸ್ವಿಯಾದ್ರೆ, ಅಮೆರಿಕ, ರಷ್ಯಾ ಮತ್ತು ಚೀನಾ ನಂತರ ಬಾಹ್ಯಾಕಾಶಕ್ಕೆ ಮಾನವರನ್ನ ಕಳುಹಿಸಿದ 4ನೇ ದೇಶ ಅಂತ ಭಾರತ ಕರೆಸಿಕೊಳ್ಳಲಿದೆ.

-masthmagaa.com

Contact Us for Advertisement

Leave a Reply