ಬಲೂಚಿಸ್ತಾನದಲ್ಲಿ ಪಾಕ್‌ ಸೈನಿಕರ ಬರ್ಬರ ಹತ್ಯೆ!

masthmagaa.com:

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಚೆಕ್​ಪೋಸ್ಟ್ ಒಂದರ ಮೇಲೆ ಬಂಡುಕೋರರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ಧಾರೆ. ಈ ವೇಳೆ ನಾಲ್ವರು ಯೋಧರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಕೊಹ್ಲು ಜಿಲ್ಲೆಯ ಜಮಾನ್ ಖಾನ್ ಚೆಕ್ ಪೋಸ್ಟ್ ಬಳಿ ಈ ಘಟನೆ ನಡೆದಿದೆ. ಬಲೂಚಿಸ್ತಾನದಲ್ಲಿ ದೀರ್ಘಕಾಲದಿಂದಲೂ ಸ್ವಾತಂತ್ರ್ಯದ ಕೂಗು ಕೇಳಿ ಬರುತ್ತಲೇ ಇದೆ. ಅದಕ್ಕಾಗಿ ಇಂತಹ ಘಟನೆಗಳು ನಡೆಯುತ್ತಲೇ ಇವೆ.

ಈ ನಡುವೆ ದೇಶದ ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ತಿದೆ ಅಂತ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೊಂಡಿದ್ದಾರೆ. ರೋಶನ್ ಡಿಜಿಟಲ್ ಅಕೌಂಟ್ಸ್​ ನ ಡೆಪಾಸಿಟ್​​​ 500 ಮಿಲಿಯನ್ ಡಾಲರ್ ಅಂದ್ರೆ 7,939 ಕೋಟಿ ರೂಪಾಯಿ ದಾಟಿದೆ. ಇದರ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ಕೊರೋನಾದಿಂದ ವಿದೇಶಿ ವಿನಿಮಯ ಮತ್ತು ರಫ್ತಿನಲ್ಲಾದ ಏರಿಳಿತಗಳಿಂದ ದೇಶ ಸುಧಾರಿಸಿಕೊಳ್ತಿದೆ ಅಂತ ಇಮ್ರಾನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply