ಇಮ್ರಾನ್‌ ಖಾನ್‌ ಅವ್ರ ವಿಚಾರಣೆಯನ್ನ ಜೈಲಿನಲ್ಲಿ ನಡೆಸೋದು ಇಲ್ಲೀಗಲ್‌ ಎಂದ ಪಾಕ್‌ ಹೈ ಕೋರ್ಟ್‌!

masthmagaa.com:

ಸೈಫರ್‌ ಕೇಸ್‌ಗೆ ಸಂಬಂಧಿಸಿದಂತೆ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವ್ರ ವಿಚಾರಣೆಯನ್ನ ಜೈಲ್‌ ಒಳಗೆ ನಡೆಸೋಕೆ ಪಾಕ್‌ ಸರ್ಕಾರ ಮುಂದಾಗಿತ್ತು. ಆದ್ರೆ ಜೈಲಿನಲ್ಲಿ ವಿಚಾರಣೆ ನಡೆಸೋದು ಕಾನೂನುಬಾಹಿರ ಅಂತ ಇದೀಗ ಇಸ್ಲಮಾಬಾದ್‌ ಹೈಕೋರ್ಟ್‌ ನೆನ್ನೆ ಘೋಷಿಸಿದೆ. ಅಂದ್ಹಾಗೆ ಜೈಲುವಾಸದಲ್ಲಿರೋ ಇಮ್ರಾನ್‌ ಖಾನ್‌ ಅವ್ರ ವಿಚಾರಣೆಯನ್ನ ಸೆಕ್ಯುರಿಟಿಯ ಕಾರಣಕ್ಕೆ ಜೈಲಿನಲ್ಲೇ ನಡೆಸೋಕೆ ಈ ಹಿಂದೆ ನಿರ್ಧರಿಸಲಾಗಿತ್ತು. ʻಜೈಲಿನಲ್ಲಿ ವಿಚಾರಣೆ ನಡೆಸೋದು ಓಪನ್‌ ಕೋರ್ಟ್‌ನಲ್ಲಿ ನಡೆಸಿದ ರೀತಿಯಲ್ಲಿ ಇರೋದಿಲ್ಲ. ಆದ್ರೆ ಕೋರ್ಟ್‌ನಲ್ಲಿ ನಡೆಸಲಾಗೋ ವಿಚಾರಣೆ ಸಮಯದಲ್ಲಿ ಬೇಕಾಗೋ ಅಗತ್ಯತೆಗಳನ್ನ ಪೂರೈಸಿದ್ರೆ, ಕೆಲವೊಂದು ಬಾರಿ ಜೈಲಿನಲ್ಲೇ ವಿಚಾರಣೆ ನಡೆಸಲಾಗುತ್ತೆʼ ಅಂತ ಕೋರ್ಟ್‌ ಹೇಳಿದೆ. ಅಂದ್ಹಾಗೆ ಪಾಕ್‌ ಸರ್ಕಾರಕ್ಕೆ ಸಂಬಂಧಿಸಿದ ಕೆಲ ಸಿಕ್ರೇಟ್‌ ಡಾಕ್ಯುಮೆಂಟ್ಸ್‌ಗಳನ್ನ ಇಮ್ರಾನ್‌ ಖಾನ್‌ ಲೀಕ್‌ ಮಾಡಿದ್ದಾರೆ ಅನ್ನೋ ಕೇಸ್‌ಗೆ ಸಂಬಂಧಿಸಿದಂತೆ ಈ ವಿಚಾರಣೆ ಕೈಗೊಳ್ಳಲಾಗಿದೆ.

-masthmagaa.com

Contact Us for Advertisement

Leave a Reply