ಫಿಲಿಪ್ಪೀನ್ಸ್ ಆರ್ಥಿಕತೆಯನ್ನ ಮೇಲಕ್ಕೆತ್ತಿದ್ದ ‘ಅಖಿನೋ’ ಇನ್ನಿಲ್ಲ!

masthmagaa.com:

ಅನಾರೋಗ್ಯದಿಂದ ಬಳಲುತ್ತಿದ್ದ ಫಿಲಿಪ್ಪೀನ್ಸ್​ನ ಮಾಜಿ ಅಧ್ಯಕ್ಷ ಬೆನಿಗ್ನೊ ಅಖಿನೋ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. 2010ರಿಂದ 2016ರವರೆಗೆ ಫಿಲಿಪ್ಪೀನ್ಸ್ ಅಧ್ಯಕ್ಷರಾಗಿದ್ದ ಇವರು, ಭ್ರಷ್ಟಾಚಾರ ನಿರ್ಮೂಲನೆಗೆ ಹಲವು ಕ್ರಮಗಳನ್ನ ಕೈಗೊಂಡ್ರು. ತೆರಿಗೆಗಳ್ಳರ ವಿರುದ್ಧ ಸಮರ ಸಾರಿದ್ರು. ಅವ್ಯವಹಾರ ನಡೆಸಿದ ಮಾಜಿ ತೆರಿಗೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್​ ಕೇಸ್​ಗಳನ್ನ ಜಡಿದ್ರು. ಫಿಲಿಪ್ಪೀನ್ಸ್​ನ ಆರ್ಥಿಕತೆಯನ್ನ ಮೇಲಕ್ಕೆತ್ತಿದ್ರು. ಈ ಮೂಲಕ ‘ಸಿಕ್ ಮ್ಯಾನ್ ಆಫ್ ಏಷ್ಯಾ’ ಅನ್ನೋ ಹಣೆಪಟ್ಟಿಯಿಂದ ಫಿಲಿಪ್ಪೀನ್ಸ್ ಅನ್ನ ಹೊರತೆಗೆದ್ರು. ಇವರ ತಾಯಿ ಕೊರಝಾನ್ ಅಖಿನೋ ಕೂಡ ಫಿಲಿಪ್ಪೀನ್ಸ್ ಅಧ್ಯಕ್ಷರಾಗಿದ್ರು. ಬೆನಿಗ್ನೋ ಅಖಿನೋ ಅವರ ತಂದೆಯನ್ನ 1983ರಲ್ಲಿ ಮನಿಲಾ ಏರ್​ಪೋರ್ಟ್​ನಲ್ಲಿ ಹತ್ಯೆ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply