ಕಾಂಗ್ರೆಸ್ ನಾಯಕ ಗ್ಯಾನಿ ಝೈಲ್​​​​ ಸಿಂಗ್​​​ ಬಿಜೆಪಿ ಸೇರ್ಪಡೆ!

masthmagaa.com:

ಮಾಜಿ ರಾಷ್ಟ್ರಪತಿ ಗ್ಯಾನಿ ಝೈಲ್​ ಸಿಂಗ್ ಅವರ ಮೊಮ್ಮಗ ಇಂದರ್​ಜೀತ್ ಸಿಂಗ್​ ಇವತ್ತು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವ ಹರ್ದಿಪ್​ ಸಿಂಗ್​ ಪುರಿ ಅವರನ್ನ ಪಕ್ಷಕ್ಕೆ ಬರಮಾಡಿಕೊಂಡ್ರು. ಪಂಜಾಬ್​ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ನಡುವೆಯೇ ಝೈಲ್​ ಸಿಂಗ್​ ಅವರ ಮೊಮ್ಮಗನನ್ನ ಬಿಜೆಪಿ ತನ್ನ ಬುಟ್ಟಿಗೆ ಹಕ್ಕೊಂಡಿದೆ. ಅಂದ್ಹಾಗೆ ಇಲ್ಲಿ ಗ್ಯಾನಿ ಝೈಲ್​ ಸಿಂಗ್​ ಬಗ್ಗೆ ಸ್ವಲ್ಪ ನೋಡ್ಬೇಕು. ಇವರು 1982ರಿಂದ 1987ರವರೆಗೆ ರಾಷ್ಟ್ರಪತಿಯಾಗಿದ್ರು. ರಾಷ್ಟ್ರಪತಿ ಆದ ಮೊದಲ ಸಿಖ್​ ಸಮುದಾಯದ ವ್ಯಕ್ತಿ ಇವರಾಗಿದ್ದಾರೆ. ಇವರ ಅವಧಿಯಲ್ಲೇ ಆಪರೇಷನ್ ಬ್ಲೂ ಸ್ಟಾರ್ ನಡೀತು, ಇಂದಿರಾ ಗಾಂಧಿ ಅವರ ಹತ್ಯೆ ನಡೀತು, ಅದಾದ ಬಳಿಕ ಸಿಖ್ ವಿರೋಧಿ ದಂಗೆ ನಡೀತು. ಇಂದಿರಾ ಗಾಂಧಿಗೆ ತುಂಬಾ ಆಪ್ತರಾಗಿದ್ದ ಝೈಲ್​ ಸಿಂಗ್​ ಅವರು ಏನ್​ ಹೇಳಿದ್ರೂ ಮಾಡೋಕು ರೆಡಿ ಇದ್ರು ಅಂತ ಹೇಳಲಾಗುತ್ತೆ. ಪಂಜಾಬ್​ನ ಸ್ಥಿತಿಗತಿ ಬಗ್ಗೆ ಪ್ರಧಾನಿ ಇಂದಿರಾ ಗಾಂಧಿ ಪ್ರತಿವಾರ ಝೈಲ್​ ಸಿಂಗ್​ರಿಂದ ವರದಿ ತರಿಸಿಕೊಳ್ತಿದ್ರು. ಆಪರೇಷನ್​ ಬ್ಲೂ ಸ್ಟಾರ್​ಗೂ ಒಂದು ದಿನ ಇಂದಿರಾ ಗಾಂಧಿ ಮತ್ತು ಝೈಲ್ ಸಿಂಗ್​ ಭೇಟಿ ನಡೆದಿತ್ತು. ಹೀಗಾಗಿ ಆಪರೇಷನ್ ನಡೆದ ಬಳಿಕ ಝೈಲ್​ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡ್ಬೇಕು ಅನ್ನೋ ಕೂಗು ಸಿಖ್ ಸಮುದಾಯದಿಂದ ಕೇಳಿ ಬಂತು. ನಂತ್ರ ಇಂದಿರಾ ಗಾಂಧಿ ಹತ್ಯೆ ನಡೀತು. ಅದಾದ ಬಳಿಕ ದೇಶಾದ್ಯಂತ ಸಿಖ್ ವಿರೋಧಿ ದಂಗೆ ನಡೆದಾಗ ರಾಷ್ಟ್ರಪತಿ ಝೈಲ್​ ಸಿಂಗ್ ಪ್ರಧಾನಿ ರಾಜೀವ್​ ಗಾಂಧಿಗೆ ಕರೆ ಮಾಡಿ ಏನಾದ್ರೂ ಕ್ರಮ ಕೈಗೊಳ್ಳಿ. ಸಿಖ್ ವಿರೋಧಿ ದಂಗೆಯನ್ನ ನಿಲ್ಲಿಸಿ ಅಂತ ಪದೇಪದೆ ಮನವಿ ಮಾಡ್ತಿದ್ರಂತೆ. ಹೀಗಾಗಿ ರಾಜೀವ್ ಗಾಂಧಿ ಸರ್ಕಾರ ರಾಷ್ಟ್ರಪತಿ ಭವನದ ಟೆಲಿಫೋನ್​ ಸಂಪರ್ಕ ಮತ್ತು ಕರೆಂಟ್ ಅನ್ನ ಕಟ್ ಮಾಡಿತ್ತು ಅಂತ ಆರೋಪ ಮಾಡಲಾಗುತ್ತೆ.

-masthmagaa.com

Contact Us for Advertisement

Leave a Reply