ರಸ್ತೆಮಾರ್ಗದಲ್ಲಿ ಅಫ್ಘಾನಿಸ್ತಾನದಿಂದ ಹೊರಹೋದ ಅಮೆರಿಕನ್ನರು!

masthmagaa.com:

ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಅಂಟೋನಿ ಬ್ಲಿಂಕನ್ ಕತಾರ್ ಪ್ರವಾಸ ಕೈಗೊಂಡಿದ್ದಾರೆ. ಅಫ್ಘಾನಿಸ್ತಾನ ಬಿಟ್ಟಕ್ಕು ಸಂಬಂಧ ಕತಾರ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಅಂಟೋನಿ ಬ್ಲಿಂಕನ್​​​ಗೆ ಡಿಫೆನ್ಸ್ ಸೆಕ್ರೆಟರಿ ಲಾಯ್ಡ್ ಆಸ್ಟಿನ್ ಕೂಡ ಸಾಥ್ ನೀಡಿದ್ದಾರೆ. ಈ ನಡುವೆ ಅಫ್ಘಾನಿಸ್ತಾನದಿಂದ ನಾಲ್ವರು ಅಮೆರಿಕನ್ನರು ದೇಶ ತೊರೆದಿದ್ದಾರೆ. ತಾಲಿಬಾನಿಗಳಿಗೆ ಗೊತ್ತಿರುವಂತೆಯೇ ಮಹಿಳೆ ಮತ್ತು ಮೂವರು ಮಕ್ಕಳು ಭೂಮಾರ್ಗದ ಮೂಲಕ ಗಡಿ ದಾಟಿದ್ದಾರೆ. ಅವರನ್ನು ತಾಲಿಬಾನಿಗಳು ತಡೆಯಲಿಲ್ಲ ಅಂತ ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಅಮೆರಿಕನ್ನರು ಯಾವ ದೇಶದ ಗಡಿ ದಾಟಿದ್ದಾರೆ ಅಂತ ಮಾತ್ರ ಮಾಹಿತಿ ನೀಡಿಲ್ಲ. ಅಮೆರಿಕ ಕಂಪ್ಲೀಟ್ ಎಕ್ಸಿಟ್ ಬಳಿಕ ಅಪ್ಘಾನಿಸ್ತಾನ ತೊರೆದ ಅಮೆರಿಕನ್ನರು ಇವರಾಗಿದ್ದಾರೆ.

-masthmagaa.com

Contact Us for Advertisement

Leave a Reply