ಕಲ್ಲಿದ್ದಲು ಶಾರ್ಟೇಜ್ ವಿಚಾರ: ಕರೆಂಟ್ ಸಮಸ್ಯೆ ಆಗಲ್ಲ: ಸಚಿವರ ಭರವಸೆ

masthmagaa.com:

ದೇಶದಲ್ಲಿ ನಿರಂತರವಾಗಿ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದು, ಇದರಿಂದ ಕಲ್ಲಿದ್ದಲು ಕೊರತೆ ಎದುರಾಗಿದೆ. ಮುಂದಿನ ನಾಲ್ಕು ದಿನಗಳಿಗೆ ಮಾತ್ರ ಕಲ್ಲಿದ್ದಲು ಸ್ಟಾಕ್ ಇದೆ. ಇದ್ರಿಂದ ಮುಂದಿನ 6 ತಿಂಗಳವರೆಗೆ ಭಾರತ ಕಲ್ಲಿದ್ದಲು ಕೊರತೆಯಿಂದ ಪರದಾಡಬೇಕಾದ ಸ್ಥಿತಿ ಬರಬಹುದು.. ಕಲ್ಲಿದ್ದಲು ಕೊರತೆಯಿಂದ ಇಂಧನ ಬಿಕ್ಕಟ್ಟು ಎದುರಾಗಬಹುದು ಅಂತೆಲ್ಲಾ ವರದಿಯಾಗಿತ್ತು. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಕೇಂದ್ರ ಇಂಧನ ಸಚಿವ ಆರ್​ಕೆ ಸಿಂಗ್, ಇದೇನು ಪವರ್ ಕ್ರೈಸಿಸ್ ಅಲ್ಲ. ಪವರ್ ಕ್ರೈಸಿಸ್ ಆಗೋದೂ ಇಲ್ಲ. ಎಷ್ಟೇ ಬೇಡಿಕೆ ಹೆಚ್ಚಾದರೂ ಪೂರೈಸುವಷ್ಟು ವ್ಯವಸ್ಥೆ ನಾವು ಮಾಡ್ಕೊಂಡಿದ್ದೀವಿ. ದಿನೇ ದಿನೇ ಇಂಧನ ಬೇಡಿಕೆ ಜಾಸ್ತಿಯಾಗ್ತಿದೆ. ಜಾಸ್ತಿಯಾದಷ್ಟೂ ಒಳ್ಳೆಯದೇ. ಯಾಕಂದ್ರೆ ಹೆಚ್ಚೆಚ್ಚು ಕರೆಂಟ್ ಖರ್ಚಾಗುತ್ತಿದೆ ಅಂದ್ರೆ ದೇಶದ ಆರ್ಥಿಕತೆ ಮತ್ತೆ ರೀಸ್ಟಾರ್ಟ್​ ಆಗಿ, ವೇಗವಾಗಿ ಮುನ್ನುಗ್ಗುತ್ತಿದೆ ಅಂತ ಅರ್ಥ.

-masthmagaa.com

Contact Us for Advertisement

Leave a Reply