ಡೊಮೆಸ್ಟಿಕ್‌ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಿದ ಫ್ರಾನ್ಸ್‌! ಕಾರಣವೇನು?

masthmagaa.com:

ಕಾರ್ಬನ್‌ ಎಮಿಷನ್‌ನನ್ನ ಕಡಿತಗೊಳಿಸಲು ಪ್ರಯತ್ನಿಸುತ್ತಿರುವ ಫ್ರಾನ್ಸ್‌ ನೂತನ ಕ್ರಮವೊಂದನ್ನ ಕೈಗೊಂಡಿದೆ. ರೈಲಿನಲ್ಲಿ ಪ್ರಯಾಣಿಸಬಹುದಾದ ಅಥ್ವಾ ಕಡಿಮೆ ದೂರದ ಸ್ಥಳಗಳಿಗೆ ಇದ್ದ ದೇಶಿಯ ವಿಮಾನ ಕಾರ್ಯಾಚರಣೆಯನ್ನ ನಿಷೇಧ ಮಾಡಿದೆ. ಈ ಹೊಸ ನಿಯಮದ ಪ್ರಕಾರ, ರೈಲಿನಲ್ಲಿ ಎರಡೂವರೆ ಗಂಟೆಗಿಂತ ಕಡಿಮೆ ಟೈಮ್‌ನಲ್ಲಿ ತೆರಳಲು ಸಾಧ್ಯವಿರುವ ಯಾವುದೇ ಪ್ರಯಾಣವನ್ನ ವಿಮಾನಗಳಲ್ಲಿ ಕೈಗೊಳ್ಳುವಂತಿಲ್ಲ ಅಂತ ತಿಳಿಸಲಾಗಿದೆ. ಇದು ಗ್ರೀನ್‌ಹೌಸ್‌ ಗ್ಯಾಸ್‌ಗಳ ಹೊರಸೂಸುವಿಕೆಯನ್ನ ತಡೆಯುವಲ್ಲಿ ಕೈಗೊಳ್ಳಲಾಗಿರುವ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ ಅಂತ ಫ್ರಾನ್ಸ್‌ ಸಾರಿಗೆ ಸಚಿವ ಕ್ಲೆಮೆಂಟ್ ಬ್ಯೂನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply