ಫ್ರಾನ್ಸ್‌ನಲ್ಲಿ ಮ್ಯಾಕ್ರಾನ್ ತ್ರಿವಿಕ್ರಮ! ಹಿಜಬ್ ಬ್ಯಾನ್ ಎಂದಿದ್ದ ಪೆನ್‌ಗೆ ಸೋಲು!

masthmagaa.com:

ಕಳೆದ ಕೆಲವಾರಗಳಿಂದ ಸಾಕಷ್ಟು ಕುತೂಹಲ ಕೆರಳಿಸಿದ್ದ ಫ್ರಾನ್ಸ್‌ನ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಹಾಲಿ ಅಧ್ಯಕ್ಷ ಇಮ್ಯಾನ್‌ವುಲ್‌ ಮ್ಯಾಕ್ರಾನ್‌ ಮತ್ತೊಮ್ಮೆ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಫ್ರಾನ್ಸ್‌ನಲ್ಲಿ ಆಡಳಿತ ಪರವಾದ ಅಲೆಯಿದೆ ಅನ್ನೋದನ್ನ ಸಾಬೀತು ಪಡಿಸಿದ್ದಾರೆ. ಪ್ರತಿಸ್ಪರ್ಧಿ, ಖಟ್ಟರ್‌ ಬಲಪಂಥೀಯ ನಾಯಕಿ ನ್ಯಾಷನಲ್‌ ರ್ಯಾಲಿ ಪಾರ್ಟಿಯ ಅಧ್ಯಕ್ಷೀಯ ಅಭ್ಯರ್ಥಿ ಮಾರಿನ್‌ ಲೇ ಪೆನ್‌ ಅವರನ್ನ 59/41 ಅಂತರದಿಂದ ಪರಾಭವಗೊಳಿಸಿರುವ ಮ್ಯಾಕ್ರಾನ್ ಫ್ರಾನ್ಸ್‌ ಗದ್ದುಗೆಯ ಮೇಲೆ ಮತ್ತೊಮ್ಮೆ ಕೂರಲಿದ್ದಾರೆ. ಈ ಮೂಲಕ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಾಲಿ ಅಧ್ಯಕ್ಷರೊಬ್ಬರು ಎರಡನೇ ಬಾರಿಗೆ ಆಯ್ಕೆಯಾದಂತಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳಲ್ಲೂ ಕೂಡ ಮ್ಯಾಕ್ರಾನ್‌ ಅವರೇ ವಿಕ್ಟರಿ ಬಾರಿಸ್ತಾರೆ ಅನ್ನೋದು ಕನ್ಫಮ್‌ ಆಗಿತ್ತು. ಆದ್ರೂ ಕೂಡ ಇಬ್ಬರ ಮಧ್ಯೆ ಟೈಟ್‌ ಫೈಟ್‌ ಇದ್ದಿದ್ದರಿಂದ ಗೆಲುವು ಯಾರಿಗೆ ಅನ್ನೋದನ್ನ ಸ್ಪಷ್ಟವಾಗಿ ಹೇಳೋಕೆ ಆಗಿರ್ಲಿಲ್ಲ. ಆದ್ರೆ ಈಗ ಫಲಿತಾಂಶ ಬಂದಿದ್ದು 44 ವರ್ಷದ ಮ್ಯಾಕ್ರಾನ್‌, ಜಗತ್ತಿನ ಬಲಿಷ್ಠ ರಾಷ್ಟ್ರವೊಂದರ ಚುಕ್ಕಾಣಿಯನ್ನ ಮತ್ತೊಮ್ಮೆ ಕೈಗೆತ್ತಿಕೊಳ್ಳಲಿದ್ದಾರೆ. ಇನ್ನು ಮ್ಯಾಕ್ರಾನ್‌ಗೆ ಕೊನೇವರೆಗೂ ಟಫ್‌ ಫೈಟ್‌ ಕೊಟ್ಟ ಅಧ್ಯಕ್ಷೀಯ ಚುನಾವಣೆಯ ಪರಾಜಿತ ಅಭ್ಯರ್ಥಿ ಲೇ ಪೆನ್‌, ಈ ಕುರಿತು ಮಾತನಾಡಿದ್ದು ʼರಾಜಕಾರಣದಿಂದ ಹಿಂದೆ ಸರಿಯೋ ಮಾತೇ ಇಲ್ಲ, ನಾವು ಅಧ್ಯಕ್ಷರಾಗೋಕೆ ಬೇಕಾದ ಮತಗಳನ್ನ ಪಡೆಯೋದ್ರಲ್ಲಿ ವಿಫಲರಾಗಬಹುದು, ಆದ್ರೆ ಇದು ಸೋಲಲ್ಲ, ನಮ್ಮ ಐಡಿಯಾಲಾಜಿಗಳು ಸಾಕಷ್ಟು ಎತ್ತರಕ್ಕೆ ಹೋಗಿವೆ. ಇದು ನಮ್ಮ ಬ್ರಿಲಿಯಂಟ್‌ ವಿಕ್ಟರಿʼ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ಲೇ ಪೆನ್‌ ಖಟ್ಟರ್‌ ಬಲಪಂಥೀಯ ನಾಯಕಿಯಾಗಿದ್ದು ಈ ಹಿಂದೆ ಅಂದ್ರೆ 2012 ಹಾಗು 2017ರಲ್ಲಿ ಎರಡು ಬಾರಿ ಕೂಡ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ರು. ಆದ್ರೆ ಈ ಬಾರಿಯಾದರೂ ಗೆದ್ದು ಫ್ರಾನ್ಸ್‌ ಅದ್ಯಕ್ಷರಾಗಬೇಕು ಅಂತ ಚುನಾವಣೆಗೆ ಧುಮುಕಿದ್ದ ಲೇ ಪೆನ್‌ಗೆ ಈಗ ಮತ್ತೆ ನಿರಾಸೆಯಾಗಿದೆ. ಇತ್ತ ಗೆಲುವಿನ ರ್ಯಾಲಿ ಮಾಡಿ ಬಳಿಕ ಮಾತನಾಡಿದ ಮ್ಯಾಕ್ರಾನ್‌, ನಮ್ಮ ವಿರುದ್ದ ಮತ ಹಾಕಿರೋ ಜನರ ಕೋಪವನ್ನ ಸಮಾಧಾನ ಮಾಡೋಕೆ ಪ್ರಯತ್ನ ಪಡ್ತೀವಿ. ಈಗ ಇರೋ ಮಾದರಿಯನ್ನೇ ಮುಂದುವರೆಸೋದಿಲ್ಲ. ಸಂಪುಟಕ್ಕೆ ಹೊಸಬರನ್ನ ನೇಮಿಸಿಕೊಳ್ತೀವಿ, ಹೊಸ ಆಡಳಿತವನ್ನ ನೀಡ್ತೀವಿ ಅಂತ ಹೇಳಿದ್ದಾರೆ. ಇತ್ತ ವಿಕ್ಟರಿ ಬಾರಿಸಿದ ಇಮ್ಯಾನುಎಲ್‌ ಅವರಿಗೆ ವಿಶ್ವದ ಹಲವು ನಾಯಕರು ಶುಭ ಕೋರಿದ್ದಾರೆ. ಅಮೆರಿಕಾ, ಯುಕೆ, ಇಟಲಿ, ನಾರ್ವೆ, ಜರ್ಮನಿ, ಭಾರತ, ವಿಶ್ವಸಂಸ್ಥೆ, ಯೂರೋಪಿಯನ್ ಯೂನಿಯನ್‌ ಸೇರಿದಂತೆ ವಿಶ್ವದ ಹಲವು ನಾಯಕರು ಫ್ರಾನ್ಸ್ ಅಧ್ಯಕ್ಷರಿಗೆ ಶುಭಾಷಯಗಳನ್ನ ತಿಳಿಸಿದ್ದಾರೆ. ಇನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್‌ ಮೂಲಕ ಶುಭಾಷಯ ಕೋರಿದ್ದು ಭಾರತ ಮತ್ತು ಫ್ರಾನ್ಸ್‌ ನಡುವಿನ ಸಹಕಾರವನ್ನ ಮತ್ತಷ್ಟು ವಿಶಾಲಗೊಳಿಸೋಕೆ ಕೆಲಸ ಮಾಡೋಣ ಅಂತ ಹೇಳಿದ್ದಾರೆ. ಇದರ ನಡುವೆಯೇ ಫ್ರಾನ್ಸ್‌ ಅಧ್ಯಕ್ಷರಾಗಿ ಮರು ಆಯ್ಕೆಯಾದ ಬೆನ್ನಲ್ಲೇ ಮ್ಯಾಕ್ರನ್‌ ವಿರುದ್ದ ರಾಜಧಾನಿ ಪ್ಯಾರಿಸ್‌ನಲ್ಲಿ ಪ್ರತಿಭಟನೆ ಕೂಡ ಜೋರಾಗಿತ್ತು. ತಡರಾತ್ರಿ ಗೆಲುವಿನ ಘೋಷಣೆ ಆಗುತ್ತಿದ್ದಂತೆ ಪ್ಯಾರಿಸ್‌ನ ಮಧ್ಯಭಾಗಕ್ಕೆ ಜಮಾಯಿಸಿದ ಕೆಲ ಯುವಗುಂಪುಗಳು ಜೋರು ಗಲಾಟೆ ಮಾಡಿದ್ದಾರೆ. ಇನ್ನು ಇದನ್ನ ಹತ್ತಿಕ್ಕಿ, ಪ್ರತಿಭಟನಾಕಾರರನ್ನ ಚದುರಿಸೋಕೆ ಪೋಲೀಸರು ಅಶ್ರುವಾಯು ಸಿಡಿಸಿದ್ದಾರೆ.

-masthmagaa.com

Contact Us for Advertisement

Leave a Reply