ಪಂಜ್​ಶಿರ್​ನಲ್ಲಿ ಕದನ! ತಾಲಿಬಾನ್ ಸರ್ಕಾರ ರಚನೆ ವಿಳಂಬ

masthmagaa.com:

ಪಂಜ್​ಶಿರ್​​ನಲ್ಲಿ ಕದನ ಮುಂದುವರಿದಿರೋದ್ರಿಂದ ತಾಲಿಬಾನಿಗಳು ಸರ್ಕಾರ ರಚನೆ ಕಸರತ್ತನ್ನು ಕೂಡ ಮುಂದೂಡ್ತಿದ್ದಾರೆ. ಈ ನಡುವೆ ನಿನ್ನೆ ಕಾಬೂಲ್​​ಗೆ ತೆರಳಿರೋ ಗುಪ್ತಚರ ಸಂಸ್ಥೆ ಐಎಸ್​ಐ ಮುಖ್ಯಸ್ಥ ಫೈಜ್ ಹಮೀದ್​​​​​​ ನೇತೃತ್ವದ ಪಾಕ್ ನಿಯೋಗ ತಾಲಿಬಾನಿಗಳಿಗೆ ಸರ್ಕಾರ ರಚನೆಗೆ ಸಹಾಯ ಮಾಡ್ತಿದೆ. ಬ್ರಿಟನ್ ವಿದೇಶಾಂಗ ಸಚಿವ ಡೊಮಿನಿಕ್ ರಾಬ್​ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರನ್ನು ಭೇಟಿಯಾದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ, ಪಾಕಿಸ್ತಾನ ತಾಲಿಬಾನಿಗಳ ಜೊತೆ ಸಂಪರ್ಕದಲ್ಲಿದ್ದು, ಅಲ್ಲಿ ಪಾರದರ್ಶಿ ಸರ್ಕಾರ ಸ್ಥಾಪನೆ ಸಂಬಂಧ ಮಾತುಕತೆ ನಡೆಸ್ತಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply