ಭಾರತದ ಇತಿಹಾಸದಲ್ಲಿ ಈ ಸಂಧರ್ಭ ಸೃಷ್ಟಿಯಾಗಿದ್ದು ಇದೇ ಮೊದಲು! ಏನದು ಈ ವರದಿ ನೋಡಿ!

masthmagaa.com:

ಬಹುನಿರೀಕ್ಷಿತ ಸಂಸತ್‌ನ ಬಜೆಟ್‌ ಅಧಿವೇಶನಕ್ಕೆ ಇಂದಿನಿಂದ ಆರಂಭವಾಗಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ಕೊಟ್ಟಿದ್ದಾರೆ. ಎರಡೂ ಸದನಗಳನ್ನ ಉದ್ದೇಶಿಸಿ ಮುರ್ಮು ಮಾತಾನಾಡಿದ್ದು 2047ರ ಹೊತ್ತಿಗೆ ನಾವು ಆತ್ಮನಿರ್ಭರ ಭಾರತವನ್ನು ನಿರ್ಮಿಸಬೇಕು ಅಂತ ಕರೆಕೊಟ್ಟಿದ್ದಾರೆ. ಅಲ್ದೇ 370 ರದ್ದು, ಸರ್ಜಿಕಲ್‌ ಸ್ಟ್ರೈಕ್‌, ತ್ರಿವಳಿ ತಲಾಕ್‌ ಹೀಗೆ ಕೇಂದ್ರ ಸರ್ಕಾರದ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ದೇ ಅಭಿವೃದ್ಧಿ ಮತ್ತು ಪ್ರಕೃತಿ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಅನ್ನೋ ಯೋಚನೆಯನ್ನ ಭಾರತ ಬದಲಾಯಿಸಿದೆ. ಕೇಂದ್ರ ಸರ್ಕಾರ ‘ಹಸಿರು ಬೆಳವಣಿಗೆ’ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಭಾರತ ಬದಲಾಗಿದೆ. ಭಾರತ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕೊಡ್ತಿದೆ ಅಂತ ಹೇಳಿದ್ದಾರೆ. ಇನ್ನು ಇದಕ್ಕೂ ಮೊದಲು ಮಾತನಾಡಿದ ಪ್ರಧಾನಿ ಮೋದಿ, ಈ ಬಜೆಟ್‌ನ್ನ ಕೇವಲ ಭಾರತೀಯರು ಮಾತ್ರ ಅಲ್ಲ ಇಡೀ ವಿಶ್ವವೇ ಇಂದು ಕಾತುರದಿಂದ ಕಾಯುತ್ತಿದೆ ಅಂತ ಹೇಳಿದ್ದಾರೆ. ಇನ್ನು ಈ ಬಜೆಟ್‌ನ ಮತ್ತೊಂದು ವಿಶೇಷ ಅಂದ್ರೆ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್‌ ಮಂಡಿಸುವ ಸಂಧರ್ಭದಲ್ಲಿ ರಾಷ್ಟ್ರಪತಿ ಹಾಗೂ ಹಣಕಾಸು ಮಂತ್ರಿ ಇಬ್ರೂ ಕೂಡ ಮಹಿಳೆಯರೇ ಆಗಿದ್ದಾರೆ.

-masthmagaa.com

Contact Us for Advertisement

Leave a Reply