ಡಿ. 22ಕ್ಕೆ ಗಜಾನನ ಅಂಡ್ ಗ್ಯಾಂಗ್ ಟ್ರೈಲರ್ ರಿಲೀಸ್!

masthmagaa.com:

ಕನ್ನಡ ಸಿನಿ ಲೋಕದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ನಂತರ ಕಾಲೇಜ್ ಸ್ಟೋರಿ ಸಿನಿಮಾಗಳು ತೆರೆಗೆ ಬರದೇ ಬಹಳ ಸಮಯಗಳೇ ಕಳೆದಿದೆ. ಈಗ ಅಭಿಷೇಕ್ ಶೆಟ್ಟಿ ಸಾರಥ್ಯದಲ್ಲಿ ಗಜಾನನ ಅಂಡ್ ಗ್ಯಾಂಗ್ ಸಿನಿಮಾ ರೆಡಿಯಾಗಿರುವುದು ಗೊತ್ತೇ ಇದೆ. ಈ ಸಿನಿಮಾದ ಟ್ರೇಲರ್ ಗೆ ದಿನಗಣನೆ ಶುರುವಾಗಿದೆ.

ಮೂರು ವರ್ಷದ ಬಳಿಕ ಶ್ರೀ ಮಹಾದೇವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಲವರ್ ಬಾಯ್ ಗೆಟಪ್ ನಲ್ಲಿ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಶ್ರೀ ಮಾಸ್ ಗೆಟಪ್ ನಲ್ಲಿ‌ ಮಿಂಚಿದ್ದು, ಇದೊಂದು ಕಾಲೇಜ್ ಲವ್ ಸ್ಟೋರಿ ಜೊತೆಗೆ ಕಾಮಿಡಿ ಕಥಾ ಹಂದರದ ಸಿನಿಮಾವಾಗಿದೆ.ಈ ಹಿಂದೆ ಗಣಿ ಬಿಕಾಂ ಪಾಸ್ ಸಿನಿಮಾ ಕಥೆ ಹೇಳಿದ್ದ ಅಭಿಷೇಕ್ ಶೆಟ್ಡಿ ಗಜಾನನ ಅಂಡ್ ಗ್ಯಾಂಗ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಶ್ರೀಗೆ ಜೋಡಿಯಾಗಿ ಶ್ಯಾನೆ ಟಾಪಾಗಿರುವ ಬ್ಯೂಟಿ ಅದಿತಿ ಪ್ರಭುದೇವ ನಟಿಸಿದ್ದಾರೆ. ತೆಲುಗು ಸಂಗೀತ ನಿರ್ದೇಶಕ ಪ್ರದ್ಯೋತ್ತನ್ ಮ್ಯೂಸಿಕ್ ನೀಡಿದ್ದಾರೆ.

ಪುನೀತ್ ಕಂಠಸಿರಿಯಲ್ಲಿ ಮೂಡಿ ಬಂದಿದ್ದ ನಾನ್ ಒಳ್ಳೆಯವನೇ ನಮ್ ಟೈಮ್ ಸರಿಯಿಲ್ಲ ಹಾಡು ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ. ನಾಗೇಶ್ ಕುಮಾರ್ ಯುಎಸ್ ಗಜಾನನ ಅಂಡ್ ಗ್ಯಾಂಗ್ ಚಿತ್ರಕ್ಕೆ ನಿರ್ಮಾಣ ಮಾಡಿದ್ದು, ಬಿಗ್ ಬಾಸ್ ಖ್ಯಾತಿಯ ಬ್ರೋ ಗೌಡ, ರಘು ಗೌಡ ಮತ್ತು ಚೇತನ್ ದುರ್ಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ 22ಕ್ಕೆ ಗಜಾನನ ಅಂಡ್ ಗ್ಯಾಂಗ್ ಟ್ರೇಲರ್ ರಿಲೀಸ್ ಆಗಲಿದ್ದು, ಸದ್ಯದಲ್ಲಿ ರಿಲೀಸ್ ಡೇಟ್ ಅನ್ನ ಚಿತ್ರ ತಂಡ ಅನೌನ್ಸ್ ಮಾಡಲಿದೆ.

-masthmagaa.com

Contact Us for Advertisement

Leave a Reply