ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ʻಆಟ ಮುಗೀತುʼ ಎಂದ ಮರಿಯುಂ ಖಾನ್‌!

masthmagaa.com:

ಭ್ರಷ್ಟಾಚಾರದಿಂದ ಭಯೋತ್ಪಾದನೆವರೆಗೆ ನೂರಕ್ಕೂ ಹೆಚ್ಚು ಕೇಸ್‌ಗಳನ್ನ ಫೇಸ್‌ ಮಾಡ್ತಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವ್ರನ್ನ ಪಾಕ್‌ನ ಸುಪ್ರೀಂ ಕೋರ್ಟ್‌ ಅನರ್ಹ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನಾನೇನಾದ್ರು ಡಿಸ್‌ಕ್ವಾಲಿಫೈ ಆದ್ರೆ PTI ಪಕ್ಷವನ್ನ ಶಾ ಮಹಮ್ಮದ್ ಖುರೇಶಿ ಮುನ್ನಡೆಸಲಿದ್ದಾರೆ ಅಂತ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಅಂದ್ಹಾಗೆ ಈಗಾಗಲೇ ಇಮ್ರಾನ್‌ರ ಕೆಲ ಆಪ್ತರು ಪಕ್ಷ ತೊರೆದು ಹೋಗಿದ್ದಾರೆ. ಹೀಗಾಗಿ ಇಮ್ರಾನ್‌ ಪಕ್ಷ ಸಂಕಷ್ಟದಲ್ಲಿದ್ದು, ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಲು ಕಮಿಟಿಯೊಂದನ್ನ ರಚಿಸಿದ್ದಾರೆ ಅಂತ ವರದಿಯಾಗಿದೆ. ಇತ್ತ ಇಮ್ರಾನ್‌ ಖಾನ್‌ ಆಟ ಮುಗಿದಿದೆ ಅಂತ ಪಾಕಿಸ್ತಾನ ಮುಸ್ಲಿಂ ಲೀಗ್‌ ನವಾಜ್‌ನ ಉಪಾಧ್ಯಕ್ಷೆ ಮರಿಯುಂ ಖಾನ್‌ ಹೇಳಿದ್ದಾರೆ. ಜೊತೆಗೆ ಸಾಮೂಹಿಕವಾಗಿ PTI ನಾಯಕರು ಪಕ್ಷ ಬಿಟ್ಟು ಹೋಗ್ತಿರೋದಕ್ಕೆ ಮರಿಯುಂ ವ್ಯಂಗ್ಯವಾಡಿದ್ದಾರೆ. ಪಕ್ಷವನ್ನ ಬಿಟ್ಟೋಗುವವರ ಬಳಿ ಕೆಲವು ಪ್ರಶ್ನೆಗಳಿವೆ. ಏನಂದ್ರೆ ಪಕ್ಷದ ನಾಯಕರೇ ಅನೈತಿಕ ಕೆಲಸದಲ್ಲಿ ತೊಡಗಿದ್ದಾಗ, ಜನ ಹೇಗೆ ಅವ್ರ ಜೊತೆ ಇರ್ತಾರೆ? ಅಲ್ದೆ ಮೇ 9ರ ಹಿಂಸಾತ್ಮಕ ಘಟನೆಗಳಿಗೆ ಪ್ರಚೋದನೆ ನೀಡಿದ್ದು ಸ್ವತಃ ಇಮ್ರಾನ್‌ ಖಾನ್‌ ಅನ್ನೋದನ್ನ ಅವರ ಬೆಂಬಲಿಗರೇ ಹೇಳ್ತಿದ್ದಾರೆ ಅಂತ ಮರಿಯುಂ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply