ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಯುವತಿ ಮೇಲೆ ಗ್ಯಾಂಗ್‌ ರೇಪ್‌!

masthmagaa.com:

ಬೆಂಗಳೂರಿನಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ನಡೆದಿದೆ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನಡೆದಿರೊ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುರುವಾರ ರಾತ್ರಿ ಮೆನೆಗೆ ಹೋಗೋಕೆ ಕೇರಳ ಮೂಲದ ಯುವತಿ ರ್ಯಾಪಿಡೊ ಬೈಕ್‌ನ್ನ ಬುಕ್‌ ಮಾಡಿದ್ದಾಳೆ. ಆದರೆ ಯುವತಿ ಮದ್ಯಪಾನ ಮಾಡಿ ನಶೆಯಲ್ಲಿರೋದನ್ನ ಬೈಕ್‌ ಸವಾರ ಗಮನಿಸಿದ್ದಾನೆ. ಇದನ್ನೇ ಅವಕಾಶವಾಗಿ ಬಳಸಿಕೊಂಡು ಆಕೆಯನ್ನ ಮನೆಗೆ ಬಿಡುವ ಬದಲು ರೂಮ್​ಗೆ ಕರೆದೊಯ್ದಿದ್ದಿದ್ದಾನೆ. ಅಲ್ಲಿ ಬೈಕ್‌ ಸವಾರ ಹಾಗೂ ಆತನ ಗೆಳೆಯ ಇಬ್ಬರು ಸೇರಿ ಯುವತಿ ಮೇಲೆ ಅತ್ಯಾಚಾರ ಎಸೆಗಿದ್ದಾರೆ. ಬಳಿಕ ಯುವತಿ ಈ ಬಗ್ಗೆ ದೂರು ನೀಡಿದ್ದು, ಈಗಾಗಲೇ ಆರೋಪಿಗಳಿಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.

-masthmagaa.com

Contact Us for Advertisement

Leave a Reply