ಗುಲಾಂ ನಬಿ ಆಜಾದ್‌ರಿಂದ ಹೊಸ ಪಕ್ಷ!

masthmagaa.com:

ಕಾಂಗ್ರೆಸ್‌ನ ಹಿರಿಯ ನಾಯಕಾರಾಗಿದ್ದ ಗುಲಾಂ ನಬಿ ಆಜಾದ್‌ ಕಾಂಗ್ರೆಸ್‌ನೊಂದಿಗಿದ್ದ 50 ವರ್ಷಗಳ ಸುದೀರ್ಘ ಸಂಬಂಧವನ್ನ ಮುರಿದುಕೊಂಡಿದ್ದಾರೆ. ಇದೀಗ ರಾಜಕೀಯವಾಗಿ ಹೊಸ ಅಧ್ಯಾಯವನ್ನ ಪ್ರಾರಂಭಿಸಲು ತಯಾರಿ ನಡೆಸಿದ್ದಾರೆ. ಇವತ್ತು ಜಮ್ಮುವಿನ ಸೈನಿಕ್‌ ಕಾಲೋನಿಯಲ್ಲಿ ಸುಮಾರು 20 ಸಾವಿರಕ್ಕು ಅಧಿಕ ಜನರು ಸೇರಿದ್ದ ಸಭೆಯಲ್ಲಿ ಮಾತನಾಡಿದ ತಮ್ಮ ಹಿಂದಿನ ಪಕ್ಷದ ಬಗ್ಗೆ ಅಸಮಧಾನವನ್ನ ಹೊರ ಹಾಕಿದ್ದಾರೆ. ಕಾಂಗ್ರೇಸ್‌ ನಮ್ಮಿಂದ, ನಮ್ಮ ರಕ್ತದಿಂದಾಗಿದ್ದೆ ಹೊರತು, ಮೆಸೇಜ್‌, ಟ್ವೀಟ್ಗಳಿಂದಾಗಿದಲ್ಲ ಅಂತ ಕಿಡಿಕಾರಿದ್ರು. ನಂತ್ರ ತಮ್ಮ ಹೊಸ ಪಕ್ಷದ ಹೆಸರನ್ನು ಇನ್ನೂ ನಿರ್ಧರಿಸಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರು ಪಕ್ಷದ ಹೆಸರು ಮತ್ತು ಧ್ವಜದ ಬಗ್ಗೆ ತೀರ್ಮಾನಿಸುತ್ತಾರೆ. ನನ್ನ ಪಕ್ಷದ ಹೆಸರು ಎಲ್ಲರಿಗೂ ಅರ್ಥವಾಗುವ, ಹಿಂದೂಸ್ತಾನಿ ಹೆಸರು ಹೊಂದಿರಬೇಕು ಅಂತ ಬಯಸ್ತೇನೆ ಅಂತ ಆಜಾದ್ ಹೇಳಿದರು.

-masthmagaa.com

Contact Us for Advertisement

Leave a Reply