ಗಾಜಾ ಅಲ್‌ ಷಿಫಾ ಆಸ್ಪತ್ರೆ ‘ಡೆತ್‌ ಜೋನ್‌’ ಆಗಿದೆ: UN

masthmagaa.com:

ಗಾಜಾದ ಅಲ್‌ ಷಿಫಾ ಹಾಸ್ಟಿಟಲ್‌ ಮೇಲೆ ಇಸ್ರೇಲ್‌ ತನ್ನ ದಾಳಿಯನ್ನ ಮುಂದುವರೆಸಿದ್ದು, ಆಸ್ಪತ್ರೆಯನ್ನ ʻಡೆತ್‌ ಜೋನ್ʼ ಅಂತ ವಿಶ್ವಸಂಸ್ಥೆಯ ತಂಡವೊಂದು ಘೋಷಿಸಿದೆ. ವಿಶ್ವಸಂಸ್ಥೆಯ ಮಾನವೀಯ ನೆರವು ತಂಡ ಆಸ್ಪತ್ರೆಯಲ್ಲಿ ಆಗಿರೊ ಸಾವು ನೋವುಗಳ ಬಗ್ಗೆ ಪರಿಶೀಲನೆ ಮಾಡಿದೆ. ಈ ತಂಡ ತಮ್ಮ ಜೀವಗಳನ್ನ ಪಣಕ್ಕಿಟ್ಟು ಹಾಸ್ಪಿಟಲ್‌ ರೀಚ್‌ ಆಗಿ, ಅಲ್ಲಿ ನಡಿತಾಯಿರೊ ಮಾನವೀಯ ಬಿಕ್ಕಟ್ಟನ್ನ ಅನಾವರಣ ಮಾಡಿದೆ ಅಂತ ಹೇಳಲಾಗ್ತಿದೆ. 1 ಗಂಟೆ ಆಸ್ಪತ್ರೆಯ ಪರಿಸ್ಥಿತಿಯನ್ನ ಅವಲೋಕನ ಮಾಡಿದ ತಂಡದ ಸದಸ್ಯರು, ಆಸ್ಪತ್ರೆ ಡೆತ್‌ ಜೋನ್‌ ಆಗಿದೆ ಅಂತ ಹೇಳಿದ್ದಾರೆ. ಅಂದ್ರೆ ಅಷ್ಟು ಸಾವು ನೋವುಗಳ ಸಂಭವಿಸಿವೆ ಅಂತ. ಆಸ್ಪತ್ರೆಯಲ್ಲಿ ಶೆಲ್ಲಿಂಗ್‌ ಹಾಗೂ ಗುಂಡಿನ ದಾಳಿ ಆಗಿರೋದಕ್ಕೆ ಸಾಕ್ಷ್ಯಗಳಿವೆ. ಹಾಗೇ ಆಸ್ಪತ್ರೆಯ ಮುಂಭಾಗದಲ್ಲಿ ಸಾಮೂಹಿಕ ಸಮಾಧಿ ಇದೆ. ಕನಿಷ್ಠ 80 ಜನರನ್ನ ಅಲ್ಲಿ ಹೂಳಲಾಗಿದೆ ಅಂತ WHO ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಾಗೂ ಆಸ್ಪತ್ರೆಯಲ್ಲಿ ಇರೊ ಪೇಶಂಟ್‌ಗಳನ್ನ, ಆಸ್ಪತ್ರೆ ಸಿಬ್ಬಂದಿಯನ್ನ ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡೋಕೆ ಪ್ಲಾನ್‌ ಮಾಡಲಾಗ್ತಿದೆ ಅಂತ ಹೇಳಿದೆ. ಇದೇ ವೇಳೆ ಮಾನವೀಯ ನೆರವನ್ನ ನೀಡೋದಕ್ಕೆ ಕದನ ವಿರಾಮ ಘೋಷಿಸಬೇಕು ಅಂತ WHO ಮತ್ತೊಮ್ಮೆ ಕರೆ ನೀಡಿದೆ.

ಇತ್ತ 5 ದಿನದ ಕದನ ವಿರಾಮದ ಬದಲಾಗಿ 50 ಒತ್ತೆಯಾಳುಗಳನ್ನ ರಿಲೀಸ್‌ ಮಾಡುವ ಕುರಿತು, ಹಮಾಸ್‌ ಜೊತೆ ಇಸ್ರೇಲ್‌ ಹಾಗೂ ಅಮೆರಿಕ ಒಪ್ಪಂದದ ಕೊನೆಯ ಹಂತದಲ್ಲಿವೆ ಅಂತ ದಿ ವಾಷಿಂಗ್‌ಟನ್‌ ಪೋಸ್ಟ್‌ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಇಸ್ರೇಲ್‌ ಹಾಗೂ ಅಮೆರಿಕ ಎರಡು ಪ್ರತಿಕ್ರಿಯೆ ನೀಡಿವೆ. ಒತ್ತೆಯಾಳುಗಳನ್ನ ರಿಲೀಸ್‌ ಮಾಡುವ ಕುರಿತು ಯಾವುದೇ ಒಪ್ಪಂದ ಆಗಿಲ್ಲ ಅಂತ ಸ್ಪಷ್ಟ ಪಡಿಸಿವೆ. ಹಮಾಸ್‌ ಜೊತೆ ಯಾವುದೇ ಡೀಲ್‌ ನಡಿತಾಯಿಲ್ಲ ಅಂತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಒಪ್ಪಂದ ಮಾತುಕತೆಯನ್ನ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.

ಇಸ್ರೇಲ್‌ ದಾಳಿಯಿಂದ ನಾಶವಾಗಿರೊ ಗಾಜಾದಲ್ಲಿ ಕದನ ವಿರಾಮ ಘೋಷಣೆ ಆದ್ರೆ, ಸಂಪೂರ್ಣ ಗಾಜಾವನ್ನ ರಿಬಿಲ್ಡ್‌ ಅಂದ್ರೆ ಮರುಸ್ಥಾಪಿಸೋದಾಗಿ ಟರ್ಕಿ ಹೇಳಿದೆ. ಕದನ ವಿರಾಮ ಒಮ್ಮೆ ಘೋಷಣೆ ಆದ್ರೆ, ನಾಶವಾಗಿರೊ ಮೂಲಸೌಕರ್ಯಗಳು, ಆಸ್ಪತ್ರೆಗಳು ಹಾಗೂ ಶಾಲೆಗಳನ್ನ ರಿಬಿಲ್ಡ್‌ ಮಾಡ್ತೀವಿ. ಇಸ್ರೇಲ್‌ನಿಂದ ನಾಶವಾಗಿರೊ ಗಾಜಾವನ್ನ ಮರುಸ್ಥಾಪಿಸೋಕೆ ಬೇಕಾದ ಎಲ್ಲ ಕ್ರಮಗಳನ್ನ ತಗೋತೀವಿ ಅಂತ ಟರ್ಕಿ ಅಧ್ಯಕ್ಷ ತಾಯಿಪ್‌ ಎರ್ಡೋಆನ್‌ ಪ್ರತಿಜ್ಞೆ ಮಾಡಿದ್ದಾರೆ. ಇದೇ ವೇಳೆ ನೆತನ್ಯಾಹು ಅವ್ರಿಗೆ, ಇಸ್ರೇಲ್‌ ಬಳಿ ಪರಮಾಣು ಶಸ್ತ್ರಾಸ್ತ್ರಗಳು ಇದ್ಯಾ ಅಥ್ವಾ ಇಲ್ವಾ ಅನ್ನೊದನ್ನ ಅನೌನ್ಸ್‌ ಮಾಡುವಂತೆ ಕೇಳಿದ್ದಾರೆ.

ಇನ್ನು ಇತ್ತ ಇಸ್ರೇಲ್-ಹಮಾಸ್‌ ಸಂಘರ್ಷದ ಬಳಿಕ, ಗಾಜಾ ಹಾಗೂ ವೆಸ್ಟ್‌ ಬ್ಯಾಂಕ್‌ ಆಡಳಿತವನ್ನ ಪ್ಯಾಲಸ್ಟೀನ್‌ ಅಥಾರಿಟಿ ತಗೋಬೇಕು ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ. ಈ ಮೂಲಕ ಗಾಜಾದಿಂದ ಪ್ಯಾಲಸ್ಟೀನಿಗಳನ್ನ ಬಲವಂತವಾಗಿ ಸ್ಥಳಾಂತರ ಮಾಡೋದು, ಮತ್ತೆ ಆಕ್ರಮಣ ಮಾಡೋದು, ವಶಕ್ಕೆ ಪಡೆಯೋದೆಲ್ಲ ಆಗಬಾರ್ದು. ಗಾಜಾ ಹಾಗೂ ವೆಸ್ಟ್‌ ಬ್ಯಾಂಕ್‌ ಒಂದೇ ಆಡಳಿತದ ಅಂಡರ್‌ನಲ್ಲಿ ಬರ್ಬೇಕು. ಇದಕ್ಕಾಗಿ ನಾವೆಲ್ಲ ಕೆಲಸ ಮಾಡ್ಬೇಕು ಅಂತ ಬೈಡೆನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply