ಇಡೀ ಯುರೋಪಿಗೆ ಬೆಂಕಿ ಇಡುತ್ತಾ ಯುಕ್ರೇನ್ ಸಂಘರ್ಷ?

masthmagaa.com:

2ನೇ ಮಹಾಯುದ್ದ ಆದ್ಮೇಲೆ ತಣ್ಣಗಿದ್ದ ಯೂರೋಪ್‌, ರಷ್ಯಾ ನಡೆಸಿದ ಒಂದೇ ಒಂದು ದಾಳಿಗೆ ಅಕ್ಷರ ಸಹ ರಣಾಂಗಣ ಆಗೋಗಿದೆ. ಉಕ್ರೇನ್‌ ಪರಿಸ್ಥಿತಿ ನಾಳೆ ನಮ್ಗೂ ಬರುತ್ತಾ ಅನ್ನೋ ಆತಂಕಕ್ಕೆ ಯೂರೋಪ್ ನ ರಾಷ್ಟ್ರಗಳು ಒಳಗಾಗಿವೆ. ಹೀಗಾಗಿ ಎಲ್ಲಾ ರಾಷ್ಟ್ರಗಳು ತಮ್ಮ ಸೈನ್ಯಶಕ್ತಿಯ ವಿಮರ್ಶೆ ಮಾಡ್ಕೊಳ್ಳೋಕೆ ಶುರು ಮಾಡಿವೆ.
ಈ ನಡುವೆ ರಷ್ಯಾದ ದಾಳಿ ಯೂರೋಪ್‌ ನಲ್ಲಿ ಆಯಧ ಪೈಪೋಟಿಗೆ ನಾಂದಿ ಹಾಡುತ್ತಾ? ಈ ಮೂಲಕ ಐರೋಪ್ಯ ರಾಷ್ಟ್ರಗಳ ಸೇನಾ ಕ್ಷೇತ್ರದಲ್ಲಿ ಹೊಸ ಯುಗ ಆರಂಭವಾಗುತ್ತಾ ? ಅನ್ನೋ ಚರ್ಚೆ ಶುರುವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಈಗ ಯೂರೋಪ್​​​ನ ಬಲಿಷ್ಟ ರಾಷ್ಟ್ರಗಳಲ್ಲಿ ಒಂದಾದ ಜರ್ಮನಿ ತನ್ನ ಸೇನಾ ವೆಚ್ಚವನ್ನ ಬರೋಬ್ಬರಿ 100 ಬಿಲಿಯನ್‌ ಯೂರೋ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 8.40 ಲಕ್ಷ ಕೋಟಿಗೆ ಏರಿಸೋದಾಗಿ ಅನೌನ್ಸ್‌ ಮಾಡಿದೆ. ಈ ಬಗ್ಗೆ ಮಾಹಿತಿ ಕೊಟ್ಟಿರುವ ಜರ್ಮನಿ ಛಾನ್ಸಲರ್‌ ಏಲಾಫ್‌ ಶೋಲ್ಜ್‌ ಪ್ರಸಕ್ತ ವರ್ಷದಿಂದಲೇ ಜರ್ಮನಿ ಯ ಸೇನಾ ವೆಚ್ಚವನ್ನ ನೂರು ಬಿಲಿಯನ್‌ ಏರಿಸ್ತೀವಿ ಅಂತ ಹೇಳಿದ್ದಾರೆ. ಈಬಗ್ಗೆಮಾತನಾಡಿರುವ ಅವರು ” ಉಕ್ರೇನ್‌ ಸಂಘರ್ಷದಿಂದ ನಾವು ಹೊಸ ಯುಗದಲ್ಲಿಇದ್ದೀವಿ ಅಂತ ಹೇಳಿದ್ದಾರೆ. ಅಂದ ಹಾಗೆ ಯೂರೋಪ್ನ ರಾಷ್ಟ್ರಗಳಲ್ಲೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಜರ್ಮನಿ 4 ಟ್ರಿಲಿಯನ್‌ ಜಿಡಿಪಿ ಹೊಂದಿದೆ. ಇದು ಪ್ರಪಂಚದಲ್ಲಿ ನಾಲ್ಕನೇ ಸ್ಥಾನ ಪಡೆದು ಕೊಂಡದ್ದು ಭಾರತ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

-masthmagaa.com

 

Contact Us for Advertisement

Leave a Reply