ಪತಿ, ಪತ್ನಿ ಹಾಗೂ ಅವನು: ಯುಪಿ ಪ್ರೇಮಕತೆಗೆ ಕೊಲೆಯ ಅಂತ್ಯ

masthmagaa.com:

ಯುಪಿಯ ಗಾಜಿಯಾಬಾದ್‌ನಲ್ಲಿ ದುರಂತದ ಟ್ರೈಯಾಂಗಲ್ ಪ್ರೇಮಕತೆಯೊಂದು ಬೆಳಕಿಗೆ ಬಂದಿದೆ.‌ ವ್ಯಕ್ತಿಯೊಬ್ಬ ತನ್ನ ಪತ್ನಿಯ ಇನ್ನೊಬ್ಬ ಪ್ರಿಯಕರನಿಗೆ ತನ್ನ ಮನೆಯಲ್ಲಿ ಜಾಗ ಕೊಟ್ಟು, ಕೊನೆಗೆ ತಾನೇ ಬಲಿಯಾಗಿದ್ದಾನೆ. 25 ವರ್ಷದ ಪ್ರಿಯಾಂಕ 26 ವರ್ಷದ ಶಿವಮ್‌ ಗುಪ್ತ ಜೊತೆ ಮಾದುವೆಯಾಗಿದ್ಲು. ಆದ್ರೆ ತನ್ನ ಪ್ರಿಯಕರ 23 ವರ್ಷದ ಗರ್ಜನ್‌ ಯಾದವ್‌ ಜೊತೆ ಓಡಿಹೋಗಿದ್ದಾಳೆ. ಪಾಪ ಶಿವಮ್‌ ಗುಪ್ತ ಅವಳನ್ನ ಸಮಾಧಾನ ಮಾಡಿ ಕರೆದು ತರೋಕೆ ಹೋದಾಗ, ಆಕೆ ನಮ್ಮ ಜೊತೆ ಗರ್ಜನ್‌ ಕೂಡ ಇರ್ಲಿ ಅಂದಿದ್ದಾಳೆ. ಅಂದ್ಹಾಗೆ ಶಿವಮ್-ಪ್ರಿಯಾಂಕಗೆ 2 ವರ್ಷದ ಮಗು ಕೂಡ ಇತ್ತು. ಹೆಂಡತಿಯ ಪ್ರೇಮವನ್ನ ಶಿವಮ್‌ ಒಪ್ಪಿ, ಗರ್ಜನ್‌ಗೆ ಮನೆಯಲ್ಲಿ ಜಾಗ ಕೊಟ್ಟಿದ್ದಾನೆ. ಆದ್ರೆ ಕೆಲವು ದಿನಗಳ ನಂತರ, ಡಿಸೆಂಬರ್‌ 21ರಂದು ಇಬ್ಬರೂ ಸೇರ್ಕೊಂಡು ಶಿವಮ್‌ನ್ನ ಕೊಂದು ಬಾಡಿಯನ್ನ ಡಿಸ್ಪೋಸ್‌ ಮಾಡಿದ್ದಾರೆ. ಮಾರನೇ ದಿನ ದಾರಿಯಲ್ಲಿ ಹೋಗೋರು ದೇಹವನ್ನ ಗುರುತಿಸಿ, ಪ್ರಕರಣ ಬೆಳಕಿಗೆ ಬಂದಿದೆ. ನಂತರ ಪೊಲೀಸರು benzidine ಟೆಸ್ಟ್‌ ಮಾಡಿದಾಗ ಮನೆಯಲ್ಲಿ ಆಗಿದ್ದ ರಕ್ತದ ಕಲೆಗಳನ್ನ ಈ ಇಬ್ಬರು ಸೇರ್ಕೊಂಡು ಕ್ಲೀನ್‌ ಮಾಡಿದ್ದಾರೆ ಅಂತ ಗೊತ್ತಾಗಿದೆ. ಇಬ್ಬರ ಮೇಲೂ FIR ದಾಖಲಿಸಲಾಗಿದೆ.

-masthmagaa.com

Contact Us for Advertisement

Leave a Reply