ಪಾಕ್‌ ಸರ್ಕಾರದ ವಿರುದ್ದ ಬೀದಿಗಳಿದ ಗಿಲಗಿಟ್‌ ಬಾಲ್ಟಿಸ್ತಾನ್‌ ಜನ!

masthmagaa.com:

ಪಾಕಿಸ್ತಾನ ಆಕ್ರಮಿತ ಕಾಶ್ಮೀರ(PoK)ಯಲ್ಲಿರೊ ಗಿಲಗಿಟ್‌ ಬಾಲ್ಟಿಸ್ತಾನದಲ್ಲಿ ನಡೀತಿರೊ ಸರ್ಕಾರಿ ಬೆಂಬಲಿತ ಭ್ರಷ್ಟಾಚಾರದ ವಿರುದ್ದ ಅಲ್ಲಿನ ನಿವಾಸಿಗಳು ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ. ಪಾಕಿಸ್ತಾನ ಕಾನೂನುಬಾಹಿರವಾಗಿ ಅತಿಕ್ರಮಣ ಮಾಡಿರೊ ಈ ಗಿಲ್‌ಗಿಟ್‌ ಪ್ರದೇಶದ ನೌಕರರಿಗೆ ವೇತನಗಳನ್ನ ಕೊಡ್ತಾಯಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ, ಸಮಸ್ಯೆಯನ್ನ ಬಗೇ ಹರಿಸದೇ ಮುಂದೂಡ್ತಾ ಹೋಗ್ತಿರೋದೇ ಒಂದು ದೊಡ್ಡ ಕಳವಳಕಾರಿ ಅಂಶವಾಗಿದೆ. ಹೀಗಾಗಿ ಇಲ್ಲಿ ಪದೇ ಪದೇ ಸರ್ಕಾರದ ವಿರುದ್ದ ಧರಣಿಗಳು ನಡೀತಾ ಇರುತ್ವೆ. ಒಂದ್‌ ದಿನ ಶಿಕ್ಷಕರು ಪ್ರತಿಭಟನೆ ಮಾಡಿದ್ರೆ, ಇನ್ನೊಂದ್‌ ದಿನ ಡಾಕ್ಟರ್ಸ್‌ ರೋಡಿನಲ್ಲಿ ಇರ್ತಾರೆ. ಮತ್ತೊಂದ ದಿನ ಇತರ ಸರ್ಕಾರಿ ನೌಕರರು. ಒಂದ್‌ ರೀತಿ ಮುಗಿದಿರೊ ಸಮಸ್ಯೆಯಾಗಿದೆ. ಪಾಕ್‌ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮ ಹಕ್ಕುಗಳನ್ನ ಹಾಗೂ ವೇತನವನ್ನ ಕಸಿದುಕೊಳ್ತಿದೆ. ಭ್ರಷ್ಟ ವ್ಯವಸ್ಥೆ ಇರೋದ್ರಿಂದ ನಾವು ಬೀದಿಗಳಿಯದೇ ಬೇರೆ ಆಪ್ಶನ್‌ ಇಲ್ಲ ಅಂತ ಪ್ರತಿಭಟನಾಕಾರರೊಬ್ಬರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಇತ್ತ ಈಗಾಗಲೇ ಪ್ರವಾಹ ಹಾಗೂ ಆರ್ಥಿಕ ಸಂಕಷ್ಟ ಫೇಸ್‌ ಮಾಡ್ತಿರೋ ಪಾಕ್‌ನಲ್ಲಿ ಈಗ ಆರೋಗ್ಯ ಸಮಸ್ಯೆ ಕೂಡ ಕಾಡ್ತಿದೆ. ಪಾಕಿಸ್ತಾನದ ಕರಾಚಿಯಲ್ಲಿ ಕೇವಲ ಸೆಪ್ಟೆಂಬರ್‌ ತಿಂಗಳಲ್ಲೇ ಒಟ್ಟು 4 ಜನ ಡೆಂಗ್ಯುನಿಂದ ಸಾವನ್ನಪ್ಪಿದ್ದಾರೆ. ಹಾಗೂ ಈ ವರ್ಷದಲ್ಲಿ ಡೆಂಗ್ಯುನಿಂದ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿದೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply