ಬ್ರಿಟನ್​ ನೈಟ್​ಕ್ಲಬ್​​ಗಳಿಗೆ ಹೋದವರ ಮೈ ಮೇಲೆ ಸೂಜಿ ಚುಚ್ಚಿದ ಗುರುತು!

masthmagaa.com:

ಬ್ರಿಟನ್‌ನಲ್ಲಿ ನೈಟ್‌ಕ್ಲಬ್‌ಗಳಲ್ಲಿ ಮದ್ಯದ ಅಮಲಲ್ಲಿರೋ ಮಹಿಳೆಯರಿಗೆ ಏನನ್ನೋ ಇಂಜೆಕ್ಟ್ ಮಾಡ್ತಿರೋ ವಿಚಿತ್ರ ಪ್ರಕರಣ ಹೆಚ್ಚಾಗ್ತ ಇದೆ. ಈ ಸೂಜಿ ಚುಚ್ಚಿದ ಪರಿಣಾಮ ಮರುದಿನ ಏಳುವಾಗ ಮಹಿಳೆಯರಿಗೆ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತೆ. ಹಾಗೆ ಹಿಂದಿನ ರಾತ್ರಿ ಏನು ನಡೆದಿತ್ತು ಅನ್ನೋ ನೆನಪು ಕೂಡ ಮಹಿಳೆಯರಿಗೆ ಇರೋದಿಲ್ಲ. ಈ ಕೇಸ್‌ಗಳು ಬ್ರಿಟನ್​​ನ ನಾಟಿಂಗ್ಹ್ಯಾಮ್‌, ಎಡಿನ್ಬರ್ಗ್‌ ಮತ್ತು ಡುಂಡೀ ಸೇರಿದಂತೆ ಅನೇಕ ಕಡೆಗಳಲ್ಲಿ ಹೆಚ್ಚುತ್ತಾ ಇದೆ. ಹೀಗೆ ಚುಚ್ಚಿದಂತಹ ಗುರುತುಗಳು ಸಂತ್ರಸ್ತರ ಕಾಲು, ಮಣಿಕಟ್ಟು ಮತ್ತು ಬೆನ್ನಿನಲ್ಲಿ ಕಾಣಿಸಿಕೊಂಡಿದೆ. ಅದ್ರೆ ಇದ್ರಲ್ಲಿ ಏನ್ ಇಂಜೆಕ್ಟ್ ಮಾಡಲಾಗ್ತಿದೆ..? ಒಂದೇ ಸೂಚಿಯಲ್ಲಿ ಎಲ್ಲರಿಗೂ ಚುಚ್ತಿದ್ದಾರಾ..? ಈ ಕೆಲ್ಸ ಮಾಡ್ತಿರೋದು ಯಾರು ಅನ್ನೋ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗೆ ಚುಚ್ಚುತ್ತಿರುವ ಸೂಜಿಗಳನ್ನ ಒಬ್ಬರಿಗಿಂತ ಹೆಚ್ಚು ಜನರಿಗೆ ಬಳಸಿದ್ರೆ ವಿವಿಧ ಕಾಯಿಲೆಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡೋ ಸಾಧ್ಯತೆ ಕೂಡ ಇರುತ್ತೆ. ಇದೀಗ ಗ್ಲಾಸ್ಗೋ ಸಿಟಿಯ ಮಾಜಿ ವಿದ್ಯಾರ್ಥಿನಿಯಾಗಿರುವ ಹನ್ನಾ ಥಾಮ್ಸನ್‌ ಎನ್ನುವವರು ನೈಟ್‌ ಕ್ಲಬ್‌ಗಳ ಭದ್ರತೆಯನ್ನ ಬಲಪಡಿಸ್ಬೇಕು ಅಂತ ಒಂದು ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ 6 ದಿನಗಳಿಗಿಂತಲು ಕಡಿಮೆಯಲ್ಲಿ ಸುಮಾರು 1 ಲಕ್ಷಕ್ಕು ಅಧಿಕ ಸಹಿಗಳು ಸಂಗ್ರಹವಾಗಿದ್ದು, ಅದನ್ನ ಬ್ರಿಟನ್‌ ಸಂಸತ್ತು ಪರಿಶೀಲಿಸ್ತಾ ಇದೆ.

-masthmagaa.com

Contact Us for Advertisement

Leave a Reply