ಮ್ಯಾಕ್ಸ್‌ವೆಲ್‌ ತಲೆಗೆ ಪೆಟ್ಟು, ಇಂಗ್ಲೆಂಡ್‌ ವಿರುದ್ಧದ ಪಂದ್ಯಕ್ಕೆ ಅಲಭ್ಯ!

masthmagaa.com:

ನವೆಂಬರ್‌ 4 ರಂದು, ಅಂದ್ರೆ ಶನಿವಾರ ಅಹಮದಾಬಾದ್‌ನಲ್ಲಿ ನಡೆಯೊ ಇಂಗ್ಲೆಂಡ್‌ ವಿರುದ್ಧದ ವಿಶ್ವಕಪ್‌ ಪಂದ್ಯದಿಂದ ಆಸೀಸ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್ ರೂಲ್ಡ್‌ ಔಟ್‌ ಆಗಿದ್ದಾರೆ. ಇಂದು ಗಾಲ್ಫ್‌ ಕ್ಲಬ್‌ನಿಂದ ಹೊಟೆಲ್‌ ರೂಂಗೆ ಹೋಗುತ್ತಿದ್ದ ವೇಳೆ ಮ್ಯಾಕ್ಸ್‌ವೆಲ್‌ ಸ್ಲಿಪ್‌ ಆಗಿ ಗಾಲ್ಫ್‌ಕಾರ್ಟ್‌ನಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ತಲೆಗೆ ಸಣ್ಣ ಪೆಟ್ಟು ಬಿದ್ದಿದೆ. ಹಾಗಾಗಿ ಅವ್ರು‌ ಫಿಟ್‌ ಆಗಿ ಕಾಣ್ಸಿದ್ರು ಪ್ರೊಟೊಕಾಲ್ ಪ್ರಕಾರ ಹಲವು ದಿನಗಳು ಆಟ ಆಡೋಕಾಗಲ್ಲ. ಮ್ಯಾಕ್ಸ್‌ವೆಲ್‌ ಆಸೀಸ್‌ ತಂಡಕ್ಕೆ ಬಹಳ ಇಂಪ್ಯಾಕ್ಟ್‌ಫುಲ್‌ ಪ್ಲೇಯರ್‌. ಕಳೆದ ಪಂದ್ಯದಲ್ಲಿ ನೆದರ್ಲ್ಯಾಂಡ್‌ ವಿರುದ್ದ 40 ಬಾಲ್‌ನಲ್ಲಿ ಸೆಂಚುರಿ ಬಾರ್ಸೊ ಮೂಲಕ ಫಾರ್ಮ್‌ಗೆ ಮರಳಿದ್ರು. ಇಂಗ್ಲೆಂಡ್‌ ಸಹ ಸತತ ಸೋಲಿನಿಂದ ಕಂಗೆಟ್ಟಿದ್ದು ಬರುವ ಪಂದ್ಯದಲ್ಲಿ ಆಸೀಸ್‌ಗೆ ಟಫ್‌ ಕಾಂಪೀಟೇಶನ್‌ ಕೊಡುವ ಚಾನ್ಸ್‌ ಇದೆ. ಈ ಕಡೆ ಆಸೀಸ್‌ ಸೆಮಿಸ್‌ಗೆ ಕಾಲಿಡೋಕೆ ಉಳಿದಿರೊ ಎಲ್ಲಾ ಪಂದ್ಯಗಳು ಕ್ರೂಷಿಯಲ್‌ ಆಗಿವೆ. ಅದ್ರಿಂದ್ಲೆ ಮ್ಯಾಕ್ಸ್‌ವೆಲ್‌ ಅಲಭ್ಯವಾಗಿರೋದು ಆಸೀಸ್‌ಗೆ ತಲೆನೋವಾಗ್ಬೋದು. ಅವ್ರ ಜಾಗದಲ್ಲಿ ಕ್ಯಾಮರೂನ್‌ ಗ್ರೀನ್‌ ಅಥ್ವಾ ಮಾರ್ಕಸ್‌ ಸ್ಟಾಯ್‌ನೀಸ್ ಟೀಂ ಸೇರಿಕೊಳ್ಳೊ ಚಾನ್ಸ್‌ ಇದೆ.

-masthmagaa.com

Contact Us for Advertisement

Leave a Reply