ಮತ್ತೆ ಬಂತು ಮಂಗನ ಖಾಯಿಲೆ: WHO ಅಲರ್ಟ್

masthmagaa.com:

ಆಫ್ರಿಕಾದ ಡೆಮೊಕ್ರೇಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋ ದೇಶದಲ್ಲಿ ಮಂಕಿಪಾಕ್ಸ್ (‌mpox) ಅಥ್ವಾ ಮಂಗನ ಖಾಯಿಲೆ ಹೆಚ್ಚುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ಅಲರ್ಟ್‌ ಘೋಷಿಸಿದೆ. ಈವರೆಗೆ ಕಾಂಗೋದ ಒಟ್ಟು 26 ಪ್ರಾಂತ್ಯಗಳಲ್ಲಿ 11ರಲ್ಲಿ ಮಾತ್ರ ಈ ಪ್ರಕರಣಗಳು ಕಾಣಿಸಿಕೊಳ್ತಿದ್ವು. ಆದರೆ ಈಗ 22 ಪ್ರಾಂತ್ಯಗಳಲ್ಲಿ ಕೇಸ್‌ಗಳು ವರದಿಯಾಗಿದ್ದು, ಜಾಗತಿಕವಾಗಿ ಹರಡುವ ಲಕ್ಷಣ ಕಾಣ್ತಿದೆ ಅಂತ WHO ಕಳವಳ ವ್ಯಕ್ತಪಡಿಸಿದೆ. ಅಂದ್ಹಾಗೆ ಈ ವರ್ಷದ ಮೇನಲ್ಲಿ ಈ ಮಂಕಿಪಾಕ್ಸ್‌ ವಿಚಾರವಾಗಿ WHO ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನ ಕೊನೆಗೊಳ್ಳಿಸಿತ್ತು. ಇನ್ನು 1970 ರಿಂದಲೇ ಆಗಾಗ ಕಾಣಿಸಿಕೊಳ್ತಿದ್ದ ಮಂಗನ ಖಾಯಿಲೆಗೆ ಕಳೆದ ಒಂದು ವರ್ಷದಲ್ಲಿ 12,500 ಜನರು ತುತ್ತಾಗಿದ್ದು, 581 ಜನರು ಬಲಿಯಾಗಿದ್ದಾರೆ ಅಂತ ತಿಳಿದುಬಂದಿದೆ. ರೋಗಕ್ಕೆ ತುತ್ತಾದ ಪ್ರಾಣಿಗಳಿಂದ ಹರಡುವ ಈ ಖಾಯಿಲೆ ನಂತ್ರ ಸೋಂಕು ತಗುಲಿದ ಒಬ್ರಿಂದ ಮತ್ತೊಬ್ಬರಿಗೆ ಹರಡುತ್ತೆ. ಖಾಯಿಲೆಗೆ ಒಳಗಾಗೋರಲ್ಲಿ ಸಾಮಾನ್ಯ ಜ್ವರದ ಲಕ್ಷಣಗಳ ಜೊತೆಗೆ ಮುಖದಿಂದ ಹೊಟ್ಟೆಯ ಭಾಗದ ವರೆಗೆ ಹುಣ್ಣುಗಳು ಕಾಣಿಸಿಕೊಳ್ತವೆ.

-masthmagaa.com

Contact Us for Advertisement

Leave a Reply